ಕೊರೋನಾ ಹೊಡೆತದಿಂದ ಭಾರೀ ನಷ್ಟ ಅನುಭವಿಸಿದ ವಲಯಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

0
180
Tap to know MORE!

ನವದೆಹಲಿ: ಕೊರೋನಾ ಮೊದಲ ಅಲೆಯಿಂದ ನಲುಗಿದ ದೇಶಕ್ಕೆ ಎರಡನೇ ಅಲೆ ಗಾಯದ ಮೇಲೆಳೆದ ಬರೆಯಂತಿದೆ. ಈ ಕೊರೋನಾ ಹೊಡೆತಕ್ಕೆ ಅನೇಕ ಕ್ಷೇತ್ರಗಳು ಭಾರೀ ನಷ್ಟ ಅನುಭವಿಸಿದೆ. ಹೀಗಿರುವಾಗ ಕೊರೋನಾದಿಂದ ನಷ್ಟಕ್ಕೀಡಾಗಿರುವ ವಲಯಗಳಿಗೆ ಸರ್ಕಾರ ನೆರವು ಘೋಷಿಸಿದೆ.

ಈ ನಿಟ್ಟಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವ್ಯವಹಾರಗಳಿಗೆ ಮತ್ತು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ.

ಜಮ್ಮು ಕಾಶ್ಮೀರ: 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ | ಕೇಂದ್ರ ತನಿಖಾ ತಂಡದಿಂದ ವಿಚಾರಣೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

  • ಕೋವಿಡ್‌ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆ
  • ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಸಾಲ ಖಚಿತ ಯೋಜನೆ, ಇತರ ವಲಯಗಳಿಗೆ 60,000 ಸಾವಿರ ಕೋಟಿ ರೂಪಾಯಿ
  • ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ಜನರಿಗೆ ಸಾಲ ಖಾತರಿ ಯೋಜನೆ
  • ಹೊಸ ಹೂಡಿಕೆಗಳತ್ತ ಗಮನ ಹರಿಸುವ ಸಲುವಾಗಿ ಸಾಲ ಖಾತರಿ ಯೋಜನೆ, ಹಳೆಯದನ್ನು ಮರುಪಾವತಿ ಮಾಡುವುದಲ್ಲ
  • ತುರ್ತು ಸಾಲ ಖಾತರಿ ಯೋಜನೆಯ ಸಲುವಾಗಿ ಹೆಚ್ಚುವರಿ 1.5 ಲಕ್ಷ ಕೋಟಿ ರೂ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್
  • 11,000 ನೋಂದಣಿಗೊಂಡ ಪ್ರವಾಸಿ ಗೈಡ್‌ ಗಳಿಗೆ ಆರ್ಥಿಕ ಸಹಾಯ. ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಸರಕಾರದಿಂದ 100ಶೇ. 10 ಲಕ್ಷ ರೂ. ಮತ್ತು 1ಲಕ್ಷ ರೂ. ಸಾಲ ವ್ಯವಸ್ಥೆ.
  • 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ.
  • ಮಕ್ಕಳು ಮತ್ತು ಮಕ್ಕಳ ಆರೈಕೆಗೆಯ ಕುರಿತು ಪ್ರಾಥಮಿಕ ಗಮನ ಹರಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ 23,220 ಕೋಟಿ ರೂ. ಘೋಷಣೆ

LEAVE A REPLY

Please enter your comment!
Please enter your name here