ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಂದಲೇ ತೀವ್ರ ವಿರೋಧ!

0
270
Tap to know MORE!
ಕೆಲವು ರಾಜ್ಯ ಸರ್ಕಾರಗಳು ಪದವಿ/ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸಿ, ಆಂತರಿಕ ಮೌಲ್ಯಮಾಪನ ನಡೆಸಿ ಅಂಕಗಳನ್ನು ನೀಡಲು ಆದೇಶಿಸಿದೆ. ಆದರೂ, ಹಲವು ವಿಶ್ವವಿದ್ಯಾನಿಲಯಗಳು ಯುಜಿಸಿ ಆದೇಶಕ್ಕೆ ಕಾಯುತ್ತಿದ್ದವು. ಇದೀಗ ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾನಿಲಯಗಳಿಗೆ ಒಪ್ಪಿಗೆ ನೀಡಿತ್ತು. ದೇಶದಲ್ಲಿ ಕೊರೋನಾ ಕೊರೋನಾ ನರ್ತನ ಹೆಚ್ಚುತ್ತಿದ್ದರೂ, ಸೆಪ್ಟೆಂಬರ್ ಒಳಗೆ ಪರೀಕ್ಷೆ ನಡೆಸಿ ಎಂದು ಗಡುವು ನೀಡಿದೆ. ಮೂರಂಕಿಯಲ್ಲಿ ಕೊರೋನಾ ಹಬ್ಬುತ್ತಿರುವಾಗ ಪರೀಕ್ಷೆಗಳನ್ನು ರದ್ದುಗೊಳಿಸಿದ ಕಾಲೇಜುಗಳು, ಇದೀಗ ಐದಂಕಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಾಗ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಹಲವಾರು ಮಾಧ್ಯಮಗಳು, ಸಂಘ-ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಪರೀಕ್ಷೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಸಂಗ್ರಹವಾದರೂ, ಕೇಂದ್ರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ತೀವ್ರ ಅಪಸ್ವರ ಕೇಳಿ ಬಂದಿದೆ.
ಟ್ವಿಟ್ಟರ್ ಟ್ರೆಂಡ್ ಗಳಲ್ಲಿ #SayNoToUGCGuidelines ನಂ.1 ನಲ್ಲಿರುವುದು
ಈ ನಿಟ್ಟಿನಲ್ಲಿ ಟ್ವಿಊನಲ್ಲಿ ಕ್ಯಾತೆ ತೆಗೆದಿರುವ ವಿದ್ಯಾರ್ಥಿಗಳು ಹಲವಾರು ಅಭಿಪ್ರಾಯಗಳನ್ನು, ಮೀಮ್ ಗಳನ್ನು ಹರಿಬಿಟ್ಟಿದ್ದಾರೆ. ಕೆಲವೊಂದಿಷ್ಟು ನಿಮಗಾಗಿ!

LEAVE A REPLY

Please enter your comment!
Please enter your name here