ಪಾಕಿಸ್ತಾನಕ್ಕೆ ಜಲಬಾಧೆ !

0
275
Tap to know MORE!

ದೆಹಲಿ: ಭಾರತದ ಪ್ರಮುಖ ಮೂರು ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಗುಜರಾತ್ ನ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರಿಗಾಗಿ ಆಯೋಜಿಸಲಾಗಿದ್ದ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು , ಭಾರತ- ಪಾಕ್ ಭೂಭಾಗದಲ್ಲಿ ಒಟ್ಟು 6 ನದಿಗಳು ಹರಿಯುತ್ತವೆ. ದೇಶ ವಿಭಜನೆಯಾದಾಗ ಆದ ಒಪ್ಪಂದದಂತೆ, ಈ ೬ ನದಿಗಳ ಪೈಕಿ ಮೂರು ನದಿಗಳ ನೀರಿನಲ್ಲಿ ಇಂತಿಷ್ಟನ್ನು ಪಾಕಿಸ್ತಾನಕ್ಕೆ ಬಿಡಬೇಕಿದೆ. ಆದ್ರೆ ಉಳಿದ ಮೂರು ನದಿಗಳ ನೀರೂ ಪಾಕ್ ನತ್ತ ಹರಿಯುತ್ತಿದೆ. ಹಾಗಾಗಿ ಒಪ್ಪಂದದಲ್ಲಿ ಉಲ್ಲೇಖವಿಲ್ಲದ ನದಿಗಳ ನೀರನ್ನು ಭಾರತದ ಕಡೆ ತಿರುಗಿಸಕೊಳ್ಳಲು ನಿರ್ಧರಿಸಲಾಗಿದ್ದು, ಆ ಕುರಿತಂತೆ ಸರಕಾರ ಕಾರ್ಯ ಆರಂಭಿಸಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here