ಪಾವಂಜೆ : ಇಂದಿನಿಂದ ನೂತನ ಮೇಳದ ತಿರುಗಾಟ | ಮಳೆಗಾಲದಲ್ಲಿ ದೇವಳದಲ್ಲೇ ಪ್ರದರ್ಶನ

0
110
Tap to know MORE!

ಮೂಲ್ಕಿ ನ.27: ನಾಗವೃಜ ಕ್ಷೇತ್ರ ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಮೇಳದ ಯಾನಾರಂಭಕ್ಕೆ ಇಂದು (ನ.27) ಚಾಲನೆ ದೊರೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ತಿಳಿಸಿದರು.

ಶ್ರೀ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿವಿಧ ಕಾರ್ಯಕ್ರಮಗಳ ಮೂಲಕ ನೂತನ ಮೇಳದ ಯಾನಾರಂಭಗೊಳ್ಳಲಿದ್ದು, ಸಂಜೆ 6ರಿಂದ ರಾತ್ರಿ 11ರ ವರೆಗೆ ಕಾಲ ಮಿತಿಯಲ್ಲಿ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ” ಎಂದರು.

ಇದನ್ನೂ ಓದಿ: ಪಾವಂಜೆ : ಕೃಷಿಕರ ಅಂಗಳದಲ್ಲಿ ನಡೆಯಿತು ಕೃಷಿ ಮಾಹಿತಿ ಕಾರ್ಯಾಗಾರ

ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ‘ಮುಂದಿನ 6 ತಿಂಗಳ ಪ್ರದರ್ಶನದಲ್ಲಿ 38 ಕಲಾವಿದರು ಭಾಗವಹಿಸುವರು. ಮೇ 25ರವರೆಗೆ ಪ್ರದರ್ಶನಗಳ ಬುಕ್ಕಿಂಗ್ ಆಗಿದೆ. ಉಳಿದ ಪ್ರದರ್ಶನಕ್ಕೆ ದೇವಳದ ಭಕ್ತರು ಅವಕಾಶ ಕೋರಿದ್ದು, ಪತ್ತನಾಜೆಯವರೆಗೆ ಎಲ್ಲ ದಿನಗಳಲ್ಲಿ ಬುಕ್ಕಿಂಗ್ ಆಗಿವೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರದರ್ಶನ ನಡೆಯುತ್ತದೆ. ಮಳೆಗಾಲದ ಅವಧಿಯಲ್ಲಿ ದೇವಳದಲ್ಲಿ ಪ್ರದರ್ಶನ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

ಪಾವಂಜೆ, ಸುದ್ದಿವಾಣಿ,

ಯಕ್ಷಗಾನದ ಮೇಳ ಪರಂಪರೆಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಪಾಂಡವಶ್ವಾಮೇಧ ಪ್ರಸಂಗದ ಮೂಲಕ ನೂತನ ಮೇಳವು ತನ್ನ ತಿರುಗಾಟ ಆರಂಭಿಸಲಿದೆ . ವಿವಿಧ ಕಾರ್ಯಕ್ರಮಗಳ ಮೂಲಕ ನೂತನ ಮೇಳದ ತಿರುಗಾಟ ಆರಂಭಿಸಲಾಗುತ್ತದೆ. ಸರಕಾರದ ಕೊವಿಡ್ ನಿಯಮಗಳನ್ನೂ ಚಾಚೂ ತಪ್ಪದೇ ಪಾಲಿಸಿ ಮೇಳ ತನ್ನ ಪ್ರದರ್ಶನ ನೀಡಲಿದೆ ಎಂದು ಅವರು ಹೇಳಿದರು.

ಹೊರ ರಾಜ್ಯದ ಹಾಗೂ ಹೊರ ದೇಶದ ಬುಕ್ಕಿಂಗ್ ಆಟಗಳನ್ನೂ ಕ್ಷೇತ್ರದಲ್ಲೇ ನಡೆಸಲಾಗುವುದು.ಮಳೆಗಾಲದ ಎಲ್ಲ ಸೇವಾ ಆಟಗಳು ಕ್ಷೇತ್ರದಲ್ಲೇ ಜರುಗಲಿದೆ. ನುರಿತ ಯುವ ಕಲಾವಿದರನ್ನು ಆರಿಸಲಾಗಿದ್ದು ಅವರಿಗೆ ಪಿ ಎಫ್ ಕಲಾವಿದರ ಕುಟುಂಬವನ್ನು ಸೇರಿಸಿ ಅರೋಗ್ಯ ವಿಮೆ ಮುಂತಾದ ಸವಲತ್ತು ನೀಡಲಾಗುವುದು ಎಂದು ಪಟ್ಲ ತಿಳಿಸಿದರು.

ಮೇಳದಲ್ಲಿ ಇರುವ ನನಗೆ ಇತರ ಮೇಳದಿಂದಲೂ ಅತಿಥಿಯಾಗಿ ಆಹ್ವಾನ ಬಂದಿರುವುದರಿಂದ ಈ ಮೇಳಕ್ಕೆ ಧಕ್ಕೆ ಆಗದೇ, ಇತರ ಮೇಳಕ್ಕೂ ತೆರಳಲಿದ್ದೇನೆ, ಮೇಳದ ಇತರ ಕಲಾವಿದರಿಗೂ ಸಹ ಇದೇ ನಿಯಮವಿದೆ. ಆದರೆ ಪ್ರಥಮ ಪ್ರಾಶಸ್ತ್ಯ ಪಾವಂಜೆ ಮೇಳಕ್ಕಿರಬೇಕು ಇಲ್ಲಿ ಗೈರಾಗಿ ಇನ್ನೊಂದು ಕಡೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಸತೀಶ್ ಶೆಟ್ಟಿ ಹೇಳಿದ್ದಾರೆ.

ದೇವಳದ ಡಾ.ಯಾಜಿ ನಿರಂಜನ ಭಟ್ ಮಾತನಾಡಿ, ವಿವಿಧ ಗಣ್ಯರ ಹಾಗೂ ಕಲಾವಿದರ ಕೂಡುವಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾರಂಭವನ್ನು ಸಂಯೋಜಿಸಲಾಗಿದೆ ಎಂದರು.

ಇನ್ನು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಯಾಗ, ಯಜ್ಞಗಳು ನಡೆಯುತ್ತಿರುವ ಪಾವಂಜೆ ಕ್ಷೇತ್ರದಲ್ಲಿ ಯಕ್ಷಗಾನ ಮೇಳವನ್ನು ಆರಂಭಿಸಿದ್ದು ನೂತನ ಮೇಳದ ಪ್ರಥಮ ವರ್ಷದ ತಿರುಗಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಗಣ್ಯರ ಸಮ್ಮುಖದಲ್ಲಿ ಮೇಳವು ಲೋಕಾರ್ಪಣೆಯಾಗಲಿದೆ ಎಂದರು.

LEAVE A REPLY

Please enter your comment!
Please enter your name here