ತಿರುವನಂತಪುರ: ಕೋವಿಡ್ ಲಾಕ್ಡೌನ್ ಅವಧಿಯೂ ಸೇರಿದಂತೆ, ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ ಸೋಮವಾರ ಸಾರ್ವಜನಿಕ, ಖಾಸಗಿ ಮತ್ತು ಸೈಬರ್ ತಾಣಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಂತಹ ಸಮಗ್ರ ಯೋಜನೆಯೊಂದನ್ನು ಆರಂಭಿಸಿತು.
’ಪಿಂಕ್ ಪ್ರೊಟೆಕ್ಷನ್’ ಹೆಸರಿನ ಈ ಯೋಜನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು. ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಯ ಎದುರು ವಿವಿಧ ಪೊಲೀಸ್ ವಾಹನಗಳಿಗೆ ನಿಶಾನೆ ತೋರಿಸುವ ಮೂಲಕ ಈ ಯೋಜನೆ ವಿಧ್ಯುಕ್ತವಾಗಿ ಆರಂಭವಾಯಿತು. ಈ ಸಂದರ್ಭದಲ್ಲಿ ಡಿಜಿಪಿ ಅನಿಲ್ ಕಾಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಕ್ಷಿಣೆ ವಿರುದ್ಧ ಹೋರಾಟ: ಒಂದು ದಿನ ಉಪವಾಸ ಕೈಗೊಂಡ ಕೇರಳದ ರಾಜ್ಯಪಾಲ
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಮಹಿಳಾ ಪರವಾದ ಈ ’ಪಿಂಕ್ ಪ್ರೊಟೆಕ್ಷನ್’ ಯೋಜನೆಯಡಿ ಸರ್ಕಾರ 10 ಕಾರುಗಳು, ಬುಲೆಟ್ಗಳು ಮತ್ತು 20 ಬೈಸಿಕಲ್ಗಳು ಸೇರಿ 40 ದ್ವಿಚಕ್ರ ವಾಹನಗಳನ್ನು ಇದಕ್ಕಾಗಿ ಮೀಸಲಿರಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ, ದೌರ್ಜನ್ಯ, ಜಾಲತಾಣಗಳ ಮೂಲಕ ದೌರ್ಜನ್ಯ ಎಸಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ನಡೆಸುವಂತಹ ಪ್ರಕರಣಗಳನ್ನು ತಡೆಯುವುದು ಪಿಂಕ್ ಪ್ರೊಟೆಕ್ಷನ್ ಯೋಜನೆಯ ಪ್ರಮುಖ ಉದ್ದೇಶ.