ಪಿಎಂ-ವಾಣಿ | ಸಾರ್ವಜನಿಕ ವೈ-ಫೈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

0
209
Tap to know MORE!

ನವದೆಹಲಿ: ದೇಶದಾದ್ಯಂತ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕ ವೈ-ಫೈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಿದೆ. ಈ ಯೋಜನೆ ಅಡಿ ಒಂದು ಕೋಟಿ ಸಾರ್ವಜನಿಕ ಡೇಟಾ ಕಚೇರಿಗಳನ್ನು ಆರಂಭಿಸಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವೈ-ಫೈ ಕೇಂದ್ರಗಳನ್ನು ‘ಪಿಎಂ-ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್ (ಪಿಎಂ-ವಾಣಿ)’ ಎಂದು ಕರೆಯಲಾಗುವುದು. ಈ ಯೋಜನೆಯನ್ನು ‘ಪಬ್ಲಿಕ್ ವೈ-ಫೈ ಆಫೀಸ್ (ಪಿಡಿಒ)’, ‘ಪಿಡಿಒ ಅಗ್ರಗೇಟರ್’ ಮತ್ತು ‘ಅಪ್ಲಿಕೇಷನ್ ಪ್ರೊವೈಡರ್‌’ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಶಿವಸೇನೆ!

ದೇಶದಾದ್ಯಂತ ಹೈಸ್ಪೀಡ್‌- ಬ್ರಾಡ್‌ಬ್ಯಾಂಡ್‌ನ ಅವಶ್ಯಕತೆ ಇದೆ ಎಂಬುದು ಕೋವಿಡ್‌-19 ಲಾಕ್‌ಡೌನ್‌ನ ಅವಧಿಯಲ್ಲಿ ಅರಿವಿಗೆ ಬಂದಿದೆ. ಈ ಯೋಜನೆ ಅನುಷ್ಠಾನದಿಂದ 4ಜಿ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲೂ ವೇಗದ ಇಂಟರ್‌ನೆಟ್ ಸೇವೆ ದೊರೆಯಲಿದೆ. ಸಣ್ಣ ಬಂಡವಾಳ ಇರುವವರೂ ಉದ್ಯಮಿಗಳಾಗುವ ಅವಕಾಶ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here