ಪಿಯುಸಿ ಉಪನ್ಯಾಸಕರ ನೇಮಕಾತಿ ಕೌನ್ಸೆಲಿಂಗ್ ಗೆ ದಿನಾಂಕ ಪ್ರಕಟ

0
167
Tap to know MORE!

ಕೆಲ ದಿನಗಳ ಹಿಂದಷ್ಟೇ ಪಿಯು ಉಪನ್ಯಾಸಕರ ನೇಮಕಕ್ಕೆ ಕೌನ್ಸೆಲಿಂಗ್ ನಡೆಯಸಲು ಆರ್ಥಿಕ ಮತ್ತು ಶಿಕ್ಷಣ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ , ಇಂದು ರಾಜ್ಯ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಕೌನ್ಸೆಲಿಂಗ್ ದಿನಾಂಕವನ್ನು ಪ್ರಕಟಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ದಿನಾಂಕ ನಿರ್ಧರಿಸುವ ಕುರಿತು ಇಂದು ಶಿಕ್ಷಣ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ ಹಾಗೂ ಪದವಿಪೂರ್ವ ಮಂಡಳಿಯ ನಿರ್ದೇಶಕರ ಜೊತೆ ಸಭೆ ಸೇರಿ ಚರ್ಚಿಸಲಾಯಿತು. ದೀರ್ಘ ಸಮಾಲೋಚನೆ ನಂತರ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ‌ ನೇಮಕಾತಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು  ಆಗಸ್ಟ್ 10, 2020 ರಂದು ಆರಂಭಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇನ್ನು ಈ ಹಿಂದೆ ಪಿಯುಸಿ ಉಪನ್ಯಾಸಕರ ಆಯ್ಕೆ ಫಲಿತಾಂಶ ಪ್ರಕಟವಾಗಿತ್ತು. ಆದರೆ ಬಳಿಕ ಕೋರ್ಟ್ ತಡೆಯಾಜ್ಞೆ ಮಂತಾದ ಸಮಸ್ಯೆಗಳಿಂದ ರದ್ದಾಗಿದ್ದ ಈ ಪ್ರಕ್ರಿಯೆ
ಜುಲೈ 8 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶ ಮೇರೆಗೆ ಕೌನ್ಸೆಲಿಂಗ್ ನ್ನು ಮುಂದೂಡಲಾಗಿತ್ತು. ಕಳೆದ ಆರು ವರ್ಷಗಳಿಂದ ತೂಗುಯ್ಯಾಲೆಯ ತರಹ ಇದ್ದ ಕೌನ್ಸೆಲಿಂಗ್ ಈಗ ಮತ್ತೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here