ಗುವಾಹಟಿ: ರಾಜ್ಯದಲ್ಲಿನ ಬಾಲಕಿಯರ ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ಆಸ್ಸಾಂ ಸರ್ಕಾರ ಹೊಸ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿರುವ ಬಾಲಕಿಯರಿಗೆ ಸ್ಕೂಟರ್ ನೀಡಲು ಮುಂದಾಗಿದೆ.
ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 22,000 ಸಾವಿರ ಹೆಣ್ಣುಮಕ್ಕಳಿಗೆ ಸ್ಕೂಟರ್ ನೀಡಲಿದ್ದು, ಆಸ್ಸಾಂ ಸರ್ಕಾರ ಇದಕ್ಕೆ ಸಂಬಂಧಿಸಿ ವೆಬ್ಸೈಟ್ ಒಂದನ್ನು ತೆರೆದಿದೆ. ವಿಶೇಷ ಏನಪ್ಪಾ ಅಂದ್ರೆ, ಅರ್ಹ ಬಾಲಕಿಯರು ಈ ವೆಬ್ಸೈಟ್ನಲ್ಲಿ ಸ್ಕೂಟರ್ಗಾಗಿ ಅರ್ಜಿ ಸಲ್ಲಿಸುವುದರ ಜತೆಗೆ ತಮಗಿಷ್ಟದ ಕಲರ್ನ ಸ್ಕೂಟರ್ ಆಯ್ಕೆ ಮಾಡಲು ಅವಕಾಶ ನೀಡಿದೆ.
ಸರ್ಕಾರ ಸುಮಾರು 50 ರಿಂದ 55 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದ್ದು, ಸ್ಕೂಟರ್ ಪಡೆದ ಬಾಲಕಿ ಕನಿಷ್ಠ 3 ವರ್ಷ ಆ ಸ್ಕೂಟರ್ ಮಾರುವಂತಿಲ್ಲ ಎನ್ನುವ ಷರತ್ತನ್ನು ಕೂಡ ವಿಧಿಸಲಾಗಿದೆ.