ಬೆಂಗಳೂರು: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊರೊನಾ ಭೀತಿಯ ನಡುವೆಯೇ ಪರೀಕ್ಷೆಯನ್ನು ಪೂರ್ಣಗೊಳಿಸಿ ಇದೀಗ ಫಲಿತಾಂಶ ಹೊರಬಂದಿದೆ.
ಈ ಬಾರಿಯ ಪಿಯುಸಿಯಲ್ಲಿ ಶೇ. 90.71 ಫಲಿತಾಂಶ ಪಡೆದು ಉಡುಪಿ ಮತ್ತು ದ.ಕ. ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯು ಕನಿಷ್ಠ ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕೊಡಗು ಮತ್ತು ಉತ್ತರಕನ್ನಡ ಕ್ರಮವಾಗಿ ಶೇ. 81.53 ಮತ್ತು ಶೇ. 80.97 ಪಡೆದು 2 ಮತ್ತು 3ನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು 5 ನೇ ಸ್ಥಾನದಲ್ಲಿದೆ.
ಒಟ್ಟು ಫಲಿತಾಂಶದಲ್ಲಿ ಶೇ. 41.27.ಕಲಾ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 76.20 ವಿದ್ಯಾರ್ಥಿಗಳು ಮತ್ತು ವಿಜ್ಞಾನ ವಿಭಾಗದ ಶೇ. 65.52 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 92 ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ 100 ಶೇ. ಫಲಿತಾಂಶ ಪಡೆದುಕೊಂಡಿದೆ. 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಲಭಿಸಿದೆ. ಈ ಬಾರಿಯೂ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ.
[…] ಅವಳಿ ಜಿಲ್ಲೆಗಳು ರಾಜ್ಯಕ್ಕೇ ಟಾಪ್! […]