ದ್ವಿತೀಯ ಪಿಯುಸಿ ರಿಪೀಟರ್ಸ್‌ಗಳೂ ಪರೀಕ್ಷೆ ಬರೆಯದೇ ಪಾಸ್ – ರಾಜ್ಯ ಸರ್ಕಾರ ನಿರ್ಧಾರ!

0
299
Tap to know MORE!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಆದರೆ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಈ ಕುರಿತು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವಂತ ರಾಜ್ಯ ಸರ್ಕಾರವು ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ತಿಳಿಸಿದೆ.

ಈ ಕುರಿತಂತೆ ಇಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತನ್ನ ಹೇಳಿಕೆಯನ್ನು ಸಲ್ಲಿಸಿದ್ದು, ಶೇ.35ರಷ್ಟು ಅಂಕಗಳನ್ನು ನೀಡುವ ಮೂಲಕ, ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತದೆ. ಶೇ.35ರಷ್ಟು ಅಂಕ ನೀಡಿ ಪಾಸ್ ಮಾಡೋದಕ್ಕೆ ನಿರ್ಧರಿಸಲಾಗಿದೆ ಎಂಬುದಾಗಿ ತಮ್ಮ ನಿರ್ಧಾರವನ್ನು ತಿಳಿಸಿದೆ. ಹೀಗಾಗಿ ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೇ ಪಾಸ್ ಮಾಡಲಿದೆ.

ಜುಲೈ 19 ಮತ್ತು 22 ರಂದು SSLC ಪರೀಕ್ಷೆ ; ಮಲ್ಟಿಪಲ್ ಚಾಯ್ಸ್ ಮಾದರಿಯಲ್ಲಿ ಓಎಂಆರ್ ಶೀಟ್‌ನಲ್ಲಿ ಪರೀಕ್ಷೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಮೊದಲು ಸರ್ಕಾರ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗ್ರೇಡ್ ನೀಡೋ ಮೂಲಕ ಪಾಸ್ ಮಾಡಲು ನಿರ್ಧರಿಸಿತ್ತು. ಬಳಿಕ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅಂಕಗಳನ್ನು ನೀಡಲಾಗುತ್ತದೆ ಎಂಬುದಾಗಿ ಪ್ರಕಟಿಸಿತ್ತು. ದ್ವಿತೀಯ ಪಿಯು ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಿರಲಿಲ್ಲ. ಇದರಿಂದಾಗಿ ರಿಪೀಟರ್ಸ್ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಸಿದಂತ ಸಂದರ್ಭದಲ್ಲಿ ಸರ್ಕಾರ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡೋ ನಿರ್ಧಾರವನ್ನು ಕೋರ್ಟ್ ಗೆ ತಿಳಿಸಿದೆ.

LEAVE A REPLY

Please enter your comment!
Please enter your name here