ಪಿಯು ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

0
48

ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಬಹುಕಾಲದ ಬಳಿಕ ಕೊನೆಗೂ ರಾಜ್ಯ ಸರ್ಕಾರ ಬಂಪರ್ ಸುದ್ದಿಯನ್ನು ನೀಡಿದೆ. ಶೀಘ್ರದಲ್ಲೇ ಪಿಯು ಉಪನ್ಯಾಸಕರ ನೇಮಕಕ್ಕೆ ಕೌನ್ಸೆಲಿಂಗ್ ನಡೆಯಲಿದೆ.
ಆಯ್ಕೆಗೊಂಡಿರುವ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ಗೆ ಆರ್ಥಿಕ ಇಲಾಖೆಯು ಗ್ರೀನ್ ಸಿಗ್ನಲ್ ನೀಡಿದ್ದು, ಮುಖ್ಯಮಂತ್ರಿಗಳ ಅನುಮೋದನೆಯೊಂದೇ ಬಾಕಿಯಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆಯ್ಕೆಗೊಂಡಿರುವ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ಗೆ ಆರ್ಥಿಕ ಇಲಾಖೆಯ ಹಸಿರು ನಿಶಾನೆ ದೊರಕಿದೆ. ಮುಖ್ಯಮಂತ್ರಿಗಳ ಅನುಮೋದನೆ ದೊರಕಿದ ತಕ್ಷಣ ಶೀಘ್ರ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ಪಿಯುಸಿ ಉಪನ್ಯಾಸಕರ ಆಯ್ಕೆ ಫಲಿತಾಂಶ ಪ್ರಕಟವಾಗಿತ್ತು. ಆದರೆ ಬಳಿಕ ಕೋರ್ಟ್ ತಡೆಯಾಜ್ಞೆ ಮಂತಾದ ಸಮಸ್ಯೆಗಳಿಂದ ರದ್ದಾಗಿದ್ದ ಈ ಪ್ರಕ್ರಿಯೆ
ಜುಲೈ 8 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶ ಮೇರೆಗೆ ಕೌನ್ಸೆಲಿಂಗ್ ನ್ನು ಮುಂದೂಡಲಾಗಿತ್ತು. ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಳೆದ ಆರು ವರ್ಷಗಳಿಂದ ತೂಗುಯ್ಯಾಲೆಯ ತರಹ ಇದ್ದ ಕೌನ್ಸೆಲಿಂಗ್ ಮತ್ತೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here