ಪಿಲಿಕುಳದಲ್ಲಿ ಪ್ರಾಣಿಗಳಿಗೆ ಕ್ವಾರಂಟೈನ್..!

0
136
Tap to know MORE!

ಮಂಗಳೂರು: ಕೊರೊನಾ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಬೇರೆ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡುವುದು ಸಾಮಾನ್ಯ ಆದರೆ ಪಿಲಿಕುಳ ನಿಸರ್ಗಧಾಮದ ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಇದೇ ರೀತಿಯ ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿರುವುದು ವಿಶೇಷ.!

ಕ್ವಾರಂಟೈನ್ ನಿಯಮ ಹೇಗೆ?
ಕೊರೊನಾ ಕಾರಣಕ್ಕಾಗಿ ದೇಶದ ಬೇರೆ ಬೇರೆ ಮೃಗಾಲಯಗಳಿಂದ ಕರೆ ತರುವ ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಲು ಪ್ರತ್ಯೇಕ ಕೋಣೆಯಲ್ಲಿರಿಸಿ ನಿಗಾ ವಹಿಸುವ ಕ್ವಾರಂಟೈನ್ ವ್ಯವಸ್ಥೆ ಇಲ್ಲಿದೆ. ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಕ್ವಾರಂಟೈನ್ ಕೇಂದ್ರವನ್ನು ಉನ್ನತೀಕರಿಸುವ ನಿರ್ಧಾರ ಆಡಳಿತ ಮಂಡಳಿ ಕೈಗೊಂಡಿದೆ.

ಬೇರೆ ಮೃಗಾಲಯಗಳಿಂದ ತರುವ ಪ್ರಾಣಿ-ಪಕ್ಷಿ, ಹಾವುಗಳನ್ನು ನೇರವಾಗಿ ಮೃಗಾಲಯದಲ್ಲಿ ಬಿಡುವ ಬದಲು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 1 ರಿಂದ 2 ತಿಂಗಳ ಬಳಿಕ ಯಾವುದೇ ರೋಗ ಲಕ್ಷಣಗಳು ಕಂಡು ಬಾರದೆ ಇದ್ದಲ್ಲಿ ಅವುಗಳನ್ನು ಇತರ ಪ್ರಾಣಿಗಳೊಂದಿಗೆ ಬಿಡಲಾಗುತ್ತದೆ. ಇದರೊಂದಿಗೆ 70 ಸಿಸಿ ಕ್ಯಾಮರಾಗಳ ಕಣ್ಗಾವಲು ಇರಲಿದೆ.

LEAVE A REPLY

Please enter your comment!
Please enter your name here