ಪುತ್ತೂರು : ಬಂಟರ ಸಂಘದ ವತಿಯಿಂದ ದತ್ತಿ ನಿಧಿ ಪ್ರದಾನ ಸಮಾರಂಭ

0
58

ಪುತ್ತೂರು : ತಾಲೂಕು ಬಂಟರ ಸಂಘದ ವತಿಯಿಂದ, ಮಿತ್ರಂಪಾಡಿ ಮನೆಯವರ ದತ್ತಿ ನಿಧಿ ಪ್ರಾಯೋಜಿತ “ಶ್ರೀ ಮಿತ್ರಂಪಾಡಿ ಚೆನ್ನಪ್ಪ ರೈ ಶ್ರೀಮತಿ ಡಿಂಬ್ರಿಗುತ್ತು ಸರಸ್ವತಿ ಸಿ ರೈ ಸ್ಮರಣಾರ್ಥ ಸಮಾಜಸೇವಾ ಮಿತ್ರ ಪ್ರಶಸ್ತಿ ಚಿನ್ನದ ಪದಕ-2020” ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ಈ ಬಾರಿಯ ಪುರಸ್ಕಾರವನ್ನು ನಿವೃತ್ತ ತಹಶೀಲ್ದಾರ್ ಶ್ರೀ ಚಿಲ್ಮೆತ್ತಾರು ಕೋಚಣ್ಣ ರೈ ಯವರಿಗೆ ನೀಡಿ, ಸನ್ಮಾನಿಸಲಾಯಿತು. ಆಗಸ್ಟ್ 15ರಂದು ಅವರ ಹುಟ್ಟುಹಬ್ಬವೂ ಆಗಿದ್ದರಿಂದ, ಅಂದು ಪ್ರದಾನ ಮಾಡಲಾಯಿತು. ಅವರ ಮಂಗಳೂರು ನಿವಾಸದಲ್ಲಿ ಈ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಅವರ ಪುತ್ರ ಡಾ ಮಂಜುನಾಥ ರೈ ದಂಪತಿ, ಅವರ ಮೊಮ್ಮಕ್ಕಳ, ಬಂಧುಗಳು, ಬಂಟರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here