ಎಲ್ಲದಕ್ಕೂ ಸೈ ಎನ್ನುವ ಬಹುಮುಖ ಪ್ರತಿಭೆ ಪುನೀತ್ ರಾಜ್ ಬೋಳಿಯಾರ್

0
253
Tap to know MORE!

ತುಳುನಾಡಲ್ಲಿ ನೃತ್ಯ, ಹಾಡುಗಾರಿಕೆ, ವೇಷ -ಭೂಷಣ ಮಾತುಗಾರಿಕೆಯನ್ನೊಳಗೊಂಡ ಹಾಗೂ ಗಂಡು ಕಲೆ ಎಂದೇ ಪ್ರಸಿದ್ದಿ ಪಡೆದಿರುವ ಒಂದು ಸಾಂಪ್ರದಾಯಿಕ ಕಲೆ ಯಕ್ಷಗಾನ. ಈ ಕಲೆಯನ್ನೇ ಮೈಗೂಡಿಸಿಕೊಂಡು, ಬೆಳೆಸಿಕೊಂಡು ಉದಯೋನ್ಮುಖ ಪ್ರತಿಭೆಯಾಗಿ ಯಕ್ಷರಂಗದಲ್ಲಿ ಮಿಂಚುತ್ತಿರುವ ಯುವ ಕಲಾವಿದ ಪುನೀತ್ ರಾಜ್ ಬೋಳಿಯಾರ್. ಎಲೆ ಮರೆಯ ಕಾಯಿಯಂತೆ ಬೆಳೆದು ಇತ್ತೀಚಿಗೆ ಯಕ್ಷರಂಗದಲ್ಲಿ ತಮ್ಮದೇ ಅಭಿನಯದಿಂದ ಹೊರಹೊಮ್ಮುತ್ತಿರುವ ಇವರು ಎಂತಹ ಪಾತ್ರವನ್ನು ನೀಡಿದರೂ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ,ಮಂಗಳೂರು ತಾಲೂಕಿನ,ಬೋಳಿಯಾರ್ ಗ್ರಾಮದ,ಗುಂಡ್ಯ ಎಂಬ ಊರಿನಲ್ಲಿ ಶ್ರೀಯುತ ಕೃಷ್ಣಪ್ಪ ಮತ್ತು ಚಂದ್ರಾವತಿ ದಂಪತಿಗಳ ಪುತ್ರನಾಗಿ ಫೆಬ್ರವರಿ 25,1997 ರಂದು ಜನಿಸಿದರು.

ಯಕ್ಷರಂಗದ ಯುವ ತಾರೆ ಪುನೀತ್ ರಾಜ್ ಬೋಳಿಯಾರ್

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಡಿ. ಕೆ ಜೆ. ಪಿ. ಎಚ್. ಪಿ. ಶಾಲೆ ಪಾಣೆಲ, ಹಾಗೂ ಪ್ರೌಢ ಶಿಕ್ಷಣವನ್ನು ಶಾರದಾ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮುಡಿಪು ಇಲ್ಲಿ ತನ್ನ ಪದವಿ ಶಿಕ್ಷಣವನ್ನು ಮುಗಿಸಿ ನಂತರ ಬಿ. ಕಾಂ. ಪದವಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿರುತ್ತಾರೆ.

“ನಮ್ಮ ಪ್ರಯತ್ನದ ಪ್ರತಿಫಲಕ್ಕೆ ಒಬ್ಬರು ಕಾರಣರಾಗಿರುತ್ತಾರೆ” ಎಂಬಂತೆ ಇವರು ತನ್ನ ತಾಯಿಯ ಆಸೆಯಂತೆ ಯಕ್ಷಗಾನಕ್ಕೆ ಸೇರಿ ಶ್ರೀ ದತ್ತಾತ್ರೆಯ ಯಕ್ಷಗಾನ ಮಂಡಳಿ ಕುರ್ನಾಡ್ ಇವರ ಯಕ್ಷಗಾನ ಕೇಂದ್ರ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರುಗಳಾದ ಸಬ್ಬಣ್ಣ ಕೋಡಿ ರಾಮ ಭಟ್ ಇವರನ್ನು ತಮ್ಮ ಗುರುಗಳಾಗಿ ಸ್ವೀಕರಿಸಿದರು.

ನಾಲ್ಕನೇ ತರಗತಿಯಲ್ಲಿ ಯಕ್ಷಗಾನದಲ್ಲಿ ತೊಡಗಿಕೊಂಡ ಇವರು ನಂತರ ಏಳನೇ ತರಗತಿಯಲ್ಲಿ ತನ್ನ ಮನೆಯವರ ಆಸೆಯಂತೆ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ, ಅಮ್ಮುಂಜೆ ಮೋಹನ್ ಕುಮಾರ್ ಅವರ ಸಲಹೆಯಂತೆ ಶ್ರೀ ಕ್ಷೇತ್ರ ಕಟೀಲು ಮೂರನೇ ಮೇಳದಲ್ಲಿ ಯಕ್ಷಗಾನ ಪಾತ್ರವನ್ನು ಮಾಡಲು ಪ್ರಾರಂಭಿಸಿದ ಇವರು ನಂತರ ಶ್ರೀ ಕ್ಷೇತ್ರ ಕಟೀಲು ೨, ೪ ಮತ್ತು ೧ ನೇ ಮೇಳದಲ್ಲಿ ತಮ್ಮ ವೃತ್ತಿಯನ್ನು ಮುಂದುವರೆಸುತ್ತಾ ಬಂದಿರುತ್ತಾರೆ.

ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಎಡನೀರು ಶ್ರೀ ದಕ್ಷಿಣಮೂರ್ತಿ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಇದರಲ್ಲಿ ಗಾನಕೋಗಿಲೆ ದಿನೇಶ್ ಭಟ್ ಅಮ್ಮಣ್ಣಯ, ಪುತ್ತೂರು ಶ್ರೀಧರ ಭಂಡಾರಿ, ರವಿರಾಜ ಭಟ್ ಪನೆಯಾಲ, ಲಕ್ಷ್ಮಣ ಕುಮಾರ್ ಮಾರಕಡ, ಶಂಬಯ್ಯ ಭಟ್ ಕಂಜರ್ಪನೆ, ಶಶಿಧರ್ ಕುಲಾಲ್ ಕನ್ಯಾನ, ಪೂಕಳ ಲಕ್ಷ್ಮೀನಾರಾಯಣ ಭಟ್ ಸಲಹೆಯೊಂದಿಗೆ ನಾಲ್ಕು ವರ್ಷ ಸೇವೆಯನ್ನು ಮಾಡಿರುತ್ತಾರೆ.

ಪ್ರಸ್ತುತ ಶ್ರೀ ಕ್ಷೇತ್ರ ಕಟೀಲು ಆರನೇ ಮೇಳದಲ್ಲಿ ಕಿರೀಟ ವೇಷದಲ್ಲಿ ಪ್ರಜ್ವಲಿಸುತ್ತಿರುವ ಪ್ರತಿಭೆ ಮೂರು ವರ್ಷದಿಂದ ಕಟೀಲು ತಾಯಿಯ ಸೇವೆಗೈಯುತ್ತಿರುವ ಇವರು ಪುಂಡಿಕಾಯ್ ಗೋಪಾಲ ಕೃಷ್ಣ ಭಟ್ ಇವರ ಮಾರ್ಗದರ್ಶನದಿಂದ ಕಿರೀಟ ವೇಷದಲ್ಲಿ ಇವರದ್ದೇ ಆದ ಹೊಸ ಶೈಲಿಯನ್ನು ಮೂಡಿಸಿರುವುದು ಇವರ ಹೆಮ್ಮೆ. ಯಕ್ಷಕಿರೀಟ ಶ್ರೀ ಸುಬ್ರಾಯ ಹೊಳ್ಳರ ವೇಷ ಇವರಿಗೆ ಕಿರೀಟ ವೇಷದಲ್ಲಿ ಅತೀ ಹೆಚ್ಚು ಆಸಕ್ತಿ ಮತ್ತು ಮುಂದುವರೆಯಲು ಸ್ಫೂರ್ತಿದಾಯಕವಾಯಿತು.

ಡ್ರಾಮಾ ಜೂನಿಯರ್ಸ್ ಖ್ಯಾತಿಯ ‘ಎಕ್ಸ್ಪ್ರೆಷನ್ ಕ್ವೀನ್’ ಅನ್ವಿಷಾ ವಾಮಂಜೂರು

ಕಿರೀಟ ವೇಷದಲಿ :ಅರ್ಜುನ, ದೇವೇಂದ್ರ, ಹಿರಣ್ಯಾಕ್ಷ, ಮಕರಾಕ್ಷ, ಇಂದ್ರಜಿತು, ಕಾರ್ತ್ಯವೀರ್ಯಾ ವಿದ್ಯುನ್ಮಾಲಿ, ದೂಮ್ರಾಕ್ಷ, ಶಿಶುಪಾಲ, ದಕ್ಷ, ಮತ್ತು ಶತ್ರುಘ್ನ, ಇತ್ಯಾದಿ.
ಪುಂಡು ವೇಷದಲ್ಲಿ :ಯಕ್ಷ, ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ – ಮುಂಡ, ಸುಂದೋಪಸುಂದ, ಸಾರಥಿ, ರಾಮ ಮತ್ತು ಲಕ್ಷ್ಮಣ ಮೊದಲಾದ ಪಾತ್ರಗಳಲ್ಲಿ ಮಿಂಚಿದ ಪ್ರತಿಭೆ ಇವರು.

2011ರಲ್ಲಿ ಗುಂಡ್ಯದಲ್ಲಿ ಪ್ರತಿಭಾ ಪುರಸ್ಕಾರ, 2012ರಲ್ಲಿ ಕೋಡಪದವಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಇವರ ಮುರಸುರ ಪಾತ್ರಕ್ಕೆ ಉತ್ತಮ ಪೋಷಕ ಪಾತ್ರದಾರಿ ಪ್ರಶಸ್ತಿ, 2014ರಲ್ಲಿ ಪ್ರತಿಭಾ ಕಾರಂಜಿಯಲ್ಲಿ ಅಭಿಮನ್ಯು ಪಾತ್ರಕ್ಕೆ ಉತ್ತಮ ಪುಂಡು ವೇಷಧಾರಿ ಪ್ರಶಸ್ತಿ, 2014 ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಏಕ ಪಾತ್ರಭಿನಯಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ. 2019 ರಲ್ಲಿ ಮಂಚಿಯಲ್ಲಿ ಹಾಗೂ 2021ರಲ್ಲಿ ಸಾಲೆತ್ತೂರಿನಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇವರು ಯಕ್ಷರಂಗದಲ್ಲಿ ಮಿಂಚಿರುವುದಲ್ಲದೆ ಉತ್ತಮ ಹಾಡುಗಾರ, ಛಾಯಾಗ್ರಹಣ, ಎಡ್ವೆಂಚರ್ ರೈಡರ್ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಉಳ್ಳ ಬಹುಮುಖ ಪ್ರತಿಭೆ. ಪ್ರಸ್ತುತ ಲಾರ್ಸನ್ & ಟರ್ಬೋ ( LARSEN & TURBO ) ಎನ್ನುವ ಖಾಸಗಿ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಕನಿಂದ ಹಿಡಿದು ಚಾರಕನ ತನಕ ಇವರು ನಿರ್ವಹಿಸಿದ ಪಾತ್ರಗಲೆಲ್ಲ ದೃಶ್ಯ ಕಾವ್ಯ ಆಕರ್ಷಕ ಪ್ರವೇಶ, ಬೀಸು ಕೈಗಳು ರಂಗವನ್ನು ಆವರಿಸಿಕೊಳ್ಳುವ ಕ್ರಮ, ಪಡಚಲನೆ, ಮಿತವಾದ ಅರ್ಥ ಇವುಗಳೆಲ್ಲದರಿಂದ ಪುಷ್ಟಿಗೊಂಡ ಪರಿಪಕ್ವಗೊಂಡ ವೇಷ ಇವರದ್ದು.

ತನ್ನ ಎಳೆಯ ವಯಸ್ಸಿನಲ್ಲಿ ಯಕ್ಷರಂಗಕ್ಕೆ ಪ್ರವೇಶ ಮಾಡಿದ ಇವರ 14 ವರ್ಷದ ಯಕ್ಷ ಪಯಣ ಇನ್ನು ಹೆಚ್ಚು ಉತ್ತುಂಗಕ್ಕೇರಲಿ ಮತ್ತು ಇವರ ಈ ವೃತ್ತಿರಂಗದಲ್ಲಿ ಸಾಧನೆ, ಗೌರವ ತರಲಿ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು .ಹಾರೈಸೋಣ
ಯಕ್ಷಗಾನಂ ಗೆಲ್ಗೆ

ರಕ್ಷಿತಾ ಕಟ್ಟತ್ತಿಲ ದಾರೆಪಡ್ಪು
ರಥಬೀದಿ, ಮಂಗಳೂರು

LEAVE A REPLY

Please enter your comment!
Please enter your name here