ಪುರಿ ರಥಯಾತ್ರೆಗೆ ಸುಪ್ರೀಂ ಕೋರ್ಟ್ ಅನುಮತಿ

0
178
Tap to know MORE!

ಪುರಿ ಜಗನ್ನಾಥ ರಥಯಾತ್ರೆಯ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದೆ ಮತ್ತು ರಥಯಾತ್ರೆಯು ದೇವಾಲಯ ಸಮಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಕೊರೋನಾ ಸಾಂಕ್ರಾಮಿಕದ ಭೀತಿಯಿಂದ ಜಾರಿಯಲ್ಲಿರುವ ಯಾವುದೇ ನೀತಿ-ನಿಯಮಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಡೆಸಲು ಅನುಮತಿ ನೀಡಿತು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ಸುಪ್ರೀಂಕೋರ್ಟ್ ಪುರಿಯಲ್ಲಿ ರಥಯಾತ್ರೆ ನಡೆಸಲು ಮಾತ್ರ ಪರಿಗಣಿಸುತ್ತಿದೆ ಮತ್ತು ಒಡಿಶಾದಲ್ಲಿ ಬೇರೆಲ್ಲಿಯೂ ಅಲ್ಲ ಎಂದು ಹೇಳಿದರು.
ಈ ಹಿಂದೆ ಜೂನ್ 23 ರಂದು ನಡೆಯಲಿರುವ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಗೆ ಉಚ್ಚ ನ್ಯಾಯಾಲಯವು ತಡೆ ನೀಡಿತ್ತು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನೂ ನಡೆಸದಂತೆ ಆದೇಶಿಸಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಭೀತಿಯಿಂದ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಯನ್ನು ತಡೆಹಿಡಿಯುವ ಹಿಂದಿನ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಮಧ್ಯಸ್ಥಿಕೆ ಅರ್ಜಿಗಳನ್ನು ಕೇಳಿದ ನಂತರ ಉಚ್ಚ ನ್ಯಾಯಾಲಯ ಇಂದು ಈ ಆದೇಶವನ್ನು ಪ್ರಕಟಿಸಿದೆ.

LEAVE A REPLY

Please enter your comment!
Please enter your name here