ಪುಸ್ತಕ

0
189
Tap to know MORE!

ನನ್ನ ನೆಚ್ಚಿನ ಮಿತ್ರ
ನೀನೆಂದು ಇರುವೆ ಹತ್ರ
ನಿನ್ನ ಗೆಳೆತನ ಮಾಡಿ ಯಾರು ಕೆಟ್ಟಿಲ್ಲ
ನಿನ್ನ ಓದಿ ಯಾರ ಕೈಯೂ ಸುಟ್ಟಿಲ್ಲ

ನಿನ್ನ ಓದಲು ನನಗೆ ಉಲ್ಲಾಸ
ನೀನು ಜೊತೆಗಿರುವ ಪ್ರತಿದಿನ ಸಂತಸ
ನೀ ಜ್ಞಾನಭಂಡಾರದ ಕಣಜ
ಪುಸ್ತಕ ಎಂದೂ ಜೊತೆಗಿರಲಿ ಮನುಜ

ನಿನ್ನ ಮೆಚ್ಚಿದ್ದಾರೆ ಎಷ್ಟು ನಾಯಕರು
ನಿನ್ನ ಒಪ್ಪಿದ್ದಾರೆ ಎಷ್ಟು ಮಹಾತ್ಮರು
ನಿನ್ನ ಓದಲು ತುಂಟ ಮಕ್ಕಳಿಗೆ ತುಸುಕಷ್ಟ
ಆದರೂ ಅವರಿಗೆ ನೀನೇ ಇಷ್ಟ

ಬದುಕು ಬದಲಿಸಿದೆ ಪುಸ್ತಕವೆಂಬ ಹೆಸರು
ನಿನ್ನ ಓದಿ ಬಂಗಾರವಾದ ಬದುಕೇ ಸುಮಾರು
ನಿನಗಿದೆ ಮನ ಪರಿವರ್ತನೆ ಮಾಡುವ ದಿವ್ಯಶಕ್ತಿ
ನಿನ್ನ ಓದಿ ವೃದ್ಧಿಯಾಗುವುದು ಯುಕ್ತಿ

ನೀ ಅಕ್ಷರಮಾಲೆಯಿಂದ ಹೊಳೆವ ಗ್ರಹ
ನೀನು ಭಾವನೆಗಳ ಮಧುರ ಸಂಗ್ರಹ
ಇನ್ನೂ ಹೆಚ್ಚು ಹೆಚ್ಚು ಓದುವ ಆಸೆಯಿದೆ
ನಿನ್ನ ಸಾರುವ, ತಿಳಿಯುವ ಹಂಬಲ ಹೆಚ್ಚಿದೆ

ಗಿರೀಶ್ ಪಿಎಂ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here