ಶಾರ್ಜಾ, ಸೆ. 28 : ಕಿಂಗ್ಸ್ ಇಲೆವೆನ್ ಪಂಜಾಬ್ನ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್, ತನ್ನ ಕೌಶಲ್ಯದಿಂದ ಒಂದು ಸಿಕ್ಸರ್ ಅನ್ನು ಉಳಿಸಲು ಬೌಂಡರಿ ಗೆರೆ ಬಳಿ ನಿಕೋಲಸ್ ಪೂರನ್ ಅವರ ಫೀಲ್ಡಿಂಗ್ ಪ್ರಯತ್ನವನ್ನು ಶ್ಲಾಘಿಸಿದರು.
ಭಾರತದ ಮಾಜಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರು ಭಾನುವಾರ ಟ್ವಿಟ್ಟರ್ನಲ್ಲಿ ಪೂರನ್ರನ್ನು ಹೊಗಳಿದ್ದಾರೆ. ಇದೇ ಟ್ವೀಟ್ಗೆ ಉತ್ತರಿಸುತ್ತಾ, “ಕ್ರಿಕೆಟ್ನ ದೇವರು ಸಚಿನ್ ತೆಂಡುಲ್ಕರ್ ಹೀಗೆ ಹೇಳಿದಾಗ, ನಿಜವಾಗಿಯೂ ಇದು ಅತ್ಯುತ್ತಮ ಫೀಲ್ಡಿಂಗ್ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಇದುವರೆಗಿನ ಅತ್ಯುತ್ತಮ ಫೀಲ್ಡಿಂಗ್.ನಾನು ಅವರ ತಂಡದ ಕೋಚ್ ಆಗಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಅವರ ಅತ್ಯುತ್ತಮ ಪ್ರದರ್ಶನವು ತಂಡದ ಇತರ ಫೀಲ್ಡರ್ಗಳನ್ನು ಪ್ರೇರೇಪಿಸಿದೆ” ಎಂದು ರೋಡ್ಸ್ ಪ್ರತ್ಯುತ್ತರಿಸಿದ್ದಾರೆ.
ಎಂಟನೇ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ನ ಸಂಜು ಸ್ಯಾಮ್ಸನ್ ಮುರುಗನ್ ಅಶ್ವಿನ್ ಅವರ ಎಸೆತದಲ್ಲಿ ಪುಲ್ ಶಾಟ್ ಆಡಿದ್ದರು ಮತ್ತು ಆಗ ಪೂರನ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಗೆರೆಯ ಬಳಿ ಚೆಂಡನ್ನು ಹಿಡಿಯಲು ಬೌಂಡರಿಯಾಚೆಗೆ ಡೈವ್ ಹೊಡೆದಿದ್ದರು.
ನಂತರ ತನ್ನ ಎಡಗೈಯಿಂದ ಚೆಂಡನ್ನು ಹಿಡಿದ ಪೂರನ್, ನೆಲದ ಮೇಲೆ ಬೀಳುವ ಒಂದು ಮಿಲಿಸೆಕೆಂಡ್ ಮೊದಲು, ಅವರು ಚೆಂಡನ್ನು ಮತ್ತೆ ಅಂಗಣಕ್ಕೆ ಬಿಸಾಡಿದರು. ಇದರಿಂದಾಗಿ, ರಾಜಸ್ಥಾನ ಕೇವಲ ಎರಡು ರನ್ಗೆ ತೃಪ್ತಿಪಡಬೇಕಾಯಿತು.