ಪೆಟ್ರೋಲ್ ಗರಿಷ್ಠ ₹40 ಕ್ಕೆ ಮಾರಾಟವಾಗಬೇಕು | ಕೇಂದ್ರಕ್ಕೆ ಚಾಟಿ ಬೀಸಿದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ!

0
172
Tap to know MORE!

ಡಿಸೆಂಬರ್ 6 ರಂದು ಮುಂಬೈನಲ್ಲಿ ಪೆಟ್ರೋಲ್ ದರ ₹90 ದಾಟಿದ್ದು, ಹಲವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ, ಆಡಳಿತ ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ದೂಷಿಸಿದ್ದಾರೆ ಮತ್ತು ಇದನ್ನು ‘ಸಾಮಾನ್ಯ ಜನರ ಶೋಷಣೆ’ ಎಂದು ಕರೆದರು.

ಇದನ್ನೂ ಓದಿ: ಪೆಟ್ರೋಲ್ ದರ ಮತ್ತಷ್ಟು ಏರಿಕೆ | ಎರಡು ವರ್ಷಗಳಲ್ಲೇ ಗರಿಷ್ಠ |

“ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹90 ದಾಟಿದೆ. ಇದು ಭಾರತೀಯರ ಶೋಷಣೆಯಾಗಿದೆ. ಪೆಟ್ರೋಲ್‌ನ ಎಕ್ಸ್-ರಿಫೈನರಿ ಬೆಲೆ ಲೀಟರ್‌ಗೆ ₹30. ಉಳಿದ ₹60, ಎಲ್ಲಾ ರೀತಿಯ ತೆರಿಗೆಗಳು ಮತ್ತು ಪೆಟ್ರೋಲ್ ಪಂಪ್‌ಗೆ ಕಮಿಷನ್ ರೂಪದಲ್ಲಿ ಹೋಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಗರಿಷ್ಠ ₹40 ಕ್ಕೆ ಮಾರಾಟವಾಗಬೇಕು” ಎಂದು ಸ್ವಾಮಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

2018 ರ ನಂತರ ಮುಂಬಯಿಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 90 ರೂ.ಗಳನ್ನು ಮುಟ್ಟಿದೆ. ಸೋಮವಾರ ಬೆಳಿಗ್ಗೆ ಕೂಡ ಪೆಟ್ರೋಲ್ ಪ್ರತಿ ಲೀಟರ್‌ಗೆ ₹90.34 ಗಳಷ್ಟಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ ₹80.47 ಇತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here