ಅಂಬರದಾಸರೆಯಂತೆ ಅಪ್ಪ

0
180
Tap to know MORE!

ಅಪ್ಪ ಅಂದ್ರೆ ಮನೆಯೊಡೆಯ, ಮಗಳ ಗೆಳೆಯ, ಮಮಕಾರದ ಮುನ್ನುಡಿ, ಕಂಬನಿ ಕಂಡೊಡನೆ ಮಿಡುಕುವ ಮೃದುಜೀವಿ, ಶಿಸ್ತಿನ ಸಿಪಾಯಿ, ನನ್ನ ಜೀವನದ ಮಿಠಾಯಿ, ಎಂದೆಲ್ಲಾ ಅಂದುಕೊಂಡ ನನಗೆ ಅಪ್ಪನ ಇನ್ನೊಂದು ಅಧ್ಬುತ ಗುಣ ಕಂಡದ್ದು ಈ ಲಾಕ್‌ಡೌನ್ ಟೈಮ್‌ನಲ್ಲೇ!

ಧಾವಂತದ ಬದುಕನ್ನು ಸ್ತಬ್ಧವಾಗಿಸಿದ ಕೊರೋನ, ಸರಳ ಜೀವನದ ಮಹತ್ವ ತಿಳಿಸಿತು. ಹೀಗೆ ಅಪ್ಪನ ಮನದಾಳದ ಒಂದು ಆಸೆ ಈಡೆರಿದ್ದು ಸಹ ಲಾಕ್‌ಡೌನ್ ಸಮಯದಲ್ಲೇ! ಅಪ್ಪನಿಗೆ ಮೊದಲಿಂದಲೂ ಕೃಷಿ ಮಾಡುವ ಆಸೆ, ಆದರೆ ವೃತ್ತಿ ಜೀವನ ಅದಕ್ಕೆ ಬಿಡುವು ಮಾಡಿಕೊಟ್ಟಿರಲಿಲ್ಲ.

ಇದನ್ನೂ ಓದಿ: ಎಲ್ಲದರ ಗೆಲುವು ನಿನ್ನ ಒಲವಿನಿಂದಪ್ಪಾ….

ಈ ಲಾಕ್‌ಡೌನ್ ದಿನಗಳು ಅಪ್ಪನ ಎಲ್ಲಾ ಅಭಿಲಾಷೆ ಈಡೆರಿಸದಿದ್ದರೂ, ಮನೆಯವರಿಗೆ ಅಪ್ಪನ ಅಭಿರುಚಿಯ ಬಗ್ಗೆ ತಿಳಿಯಿತು. ಅಪ್ಪನಿಗೆ ಅವರ ಶಾಲೆಯೆಂದರೆ ಬಹಳ ಪ್ರೀತಿ. ಅವರ ಮಗನಂತೆ ಕಾಣುತ್ತಿದ್ದರು. ಶಾಲೆಯ ಸುತ್ತಲೂ ಮರಗಿಡ ಬೆಳಸಿದ್ದನ್ನು ನೋಡಿ ಎಲ್ಲರು ಸಹಜವಾಗಿ ಶಾಲೆಯ ಚಂದ ಹೆಚ್ಚಿಸಲೋ, ಪ್ರಕೃತಿ ಸೌಂದರ್ಯ ಮೆರೆಯಲೋ ಇರಬಹುದು ಎಂದು ಅಂದುಕೊಂಡಿದ್ದರು. ಆದರೆ ಅಪ್ಪನ ಮನದಾಳದ ಮಾತು ಕೆದಕಿದಾಗ, ವಿಷಯ ಕೇವಲ ಅದಾಗಿರಲಿಲ್ಲವೆಂದು ನಂತರ ತಿಳಿಯಿತು. ಸಣ್ಣಸಣ್ಣ ಗಿಡ ಮರಗಳ ಜೊತೆಗಿನ ಅವರ ಒಡನಾಟ ದಿನೇ ದಿನೇ ಅಪರೂಪವೆನಿಸತೊಡಗಿತು.

ಇದನ್ನೂ ಓದಿ: ಅಪ್ಪ ಐ ಲವ್ ಯು

ಪ್ರತಿನಿತ್ಯ ಸೂರ್ಯೋದಯದ ಮುಂಚೆಯೇ ಪ್ರಾರಂಭವಾಗಿ, ಸಂಜೆ ಕತ್ತಲಾಗುವವರೆಗೆ ಅಪ್ಪ ದೀರ್ಘವಾಗಿ ಹಸಿರ ಜೊತೆ ಸಮಯ ಕಳೆಯುತ್ತಿದ್ದದ್ದು ನನ್ನ ಕುತೂಹಲವನ್ನು ಇನ್ನಷ್ಟು ಕೆರಳಿಸಿತು. ಯಾಕಿಷ್ಟು ಆಸಕ್ತಿಯೆಂದು ನಾನು ಕೇಳಿಯೇ ಬಿಟ್ಟೆ. ಅಪ್ಪನ ಫ್ಲಾಶ್ ಬ್ಯಾಕ್ ಜೊತೆ ಜೊತೆಗೆ , ನನಗೆ ವಿವಿಧ ರೀತಿಯಲ್ಲಿ ಕೃಷಿ ಶಿಕ್ಷಣವು ದೊರೆಯಿತು. ಬೀಜ ನೆಡುವ ಮೊದಲು, ಮಣ್ಣಿನ ಗುಣ, ಅದರ ಫಲವತ್ತತೆಯನ್ನು ಅಳೆಯುವ ರೀತಿ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರ ಮಾಡವ ವಿಧಾನ , ಹೀಗೆ ಹಲವು ವಿಷಯಗಳು ಅಪ್ಪ ಅದೆಷ್ಟು ಸರಳವಾಗಿ, ಕಣ್ಣಿಗೆ ಕಟ್ಟುವಂತೆ ಹೇಳಿಕೊಟ್ಟಿದ್ದು ಎಂದರೆ ನನಗೇ ಆಶ್ಚರ್ಯವೆನಿಸಿತು. ಮರ ಗಿಡ ಬೆಳಸುವುದು ಕೇವಲ ಒಂದು ದಿನದ ಆಚರಣೆಯಾದ ನಮಗೆ , ಪರಿಸರದ ಜೊತೆ ಇಷ್ಟೊಂದು ಅನ್ಯೋನ್ಯತೆ ಬೆಳಸಿಕೊಂಡ ಅದೆಷ್ಟು ಕೃಷಿ ಜೀವೀಗಳು, ಪರಿಸರ ಪ್ರೇಮಿಗಳ ನೆನೆದು ಒಮ್ಮೆ ಮೈ ರೋಮಾಂಚನಗೊಂಡಿತು.

ಅಪ್ಪನ ಜೊತೆಗೆ ನನ್ನಕ್ಕ ಸಹ ಮನೆಗೆ ಬೇಕಾದ ತರಕಾರಿಗಳನ್ನು ಅದೆಷ್ಟು ಸೂಕ್ಷ್ಮವಾಗಿ ಬೆಳಸಿದ್ದಳೆಂದರೆ, ಮರ ಗಿಡಗಳ ಪೋಷಣೆ ಯಾವ ಮಗುವಿನ ಪೋಷಣೆಗಿಂತಲೂ ಕಮ್ಮಿಯಲ್ಲವೆಂದು ಸ್ವಂತ ಅನುಭವ ಪಡೆದೆ. ಇದನ್ನೆಲ್ಲಾ ನಾನು ಪ್ರಾಥಮಿಕ ಶಿಕ್ಷಣದಲ್ಲಿ ಪರೀಕ್ಷೆ ಸಲುವಾಗಿ ಓದಿದ್ದೆ, ಆದರೆ ಇವೆಲ್ಲಾ ನಿತ್ಯ ಬದುಕಿನ ಮುಖ್ಯ ಅಧ್ಯಾಯವೆಂದು ಅರಿವು ಮೂಡಿಸಿದ್ದು ಅಪ್ಪನ ಕೃಷಿ ಭ
ಬೋಧನೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಪ್ಪನ ಗಳೆಯರು ಪ್ರತಿದಿನ ಸಂಜೆ ವಾಕಿಂಗ್ ಬಂದಾಗ “ಸರ್ ಹೂವು ಹಣ್ಣು ಗಿಡಗಳನ್ನು ತುಂಬಾ ಚೆನ್ನಾಗಿ ಬೆಳಸಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದಾಗ, ಅಪ್ಪ ತಮ್ಮ ಶ್ರಮದ, ಘಮವನ್ನು ಬೀರುವುದು ಭಾರಿ ಖುಷಿಯ ವಿಚಾರ.

ಅಪ್ಪ ಪ್ರತಿದಿನ ಗಿಡ ಮರಗಳನ್ನು ಮಗುವಿನಂತೆ ಪಾಲನೆ ಮಾಡುತ್ತಿದ್ದರು. ಅವುಗಳ ಆರೋಗ್ಯ ಕೆಟ್ಟಾಗ ಮಕ್ಕಳಿಗೆ ಔಷಧಿ ಕೊಡುವಂತೆ, ಗಿಡಮರಗಳ ಆರೋಗ್ಯ ನಿತ್ಯ ಗಮನಿಸುವುದು, ಸೀತಾಫಲ, ದಾಳಿಂಬೆ, ಬಾದಾಮಿ, ಮಾವು ಹಣ್ಣು ಬಿಟ್ಟಾಗ ಮನೆಯವರಲ್ಲದೆ ಶಾಲೆ ಸುತ್ತಮುತ್ತಲಿನ ಹಾಗೂ ಅಕ್ಕ ಪಕ್ಕದ ಮನೆಯ ಮಕ್ಕಳನ್ನೂ ಕರೆದು ಹಣ್ಣುಗಳನ್ನು ಹಂಚುವುದು, ಪ್ರತಿ ಮುಂಜಾನೆ ಅರಳಿ ನಗುವ ಹೂವುಗಳಿಗೆ ನೋವಾಗದೆ ಕೀಳಿ ದೇವರ ಮುಡಿಗೇರಿಸಿ ಮೆರೆಸುವುದನ್ನು ನೋಡಿ ನಾನೇನು ಹೇಳಲಿ ಅಪ್ಪನಿಗೆ, ನನ್ನ ಅಪ್ಪನೆಂದು ಹೇಳಲೇ , ನಮ್ಮ ಅಪ್ಪನೆಂದೇ! ನನಗೆ ನೆರಳಾಗಿದ್ದ ದಯೆ, ಇಂದು ಅಂಬರದಾಸರೆಯಂತೆ ಕಂಡ ನನ್ನ ಅಪ್ಪನೆಂದು ಗರ್ವ ಪಡುತಿದ್ದ ನನಗೆ , ನಮ್ಮ ಅಪ್ಪನೆಂದು ಅಭಿಮಾನ ಮೂಡುತ್ತಿದೆ.

ಹ್ಯಾಪಿ ಫಾದರ್ಸ್ ಡೇ ಅಪ್ಪ.

ಇಂತಿ ನಿಮ್ಮ ಅಭಿಮಾನಿ
ಪೆನಜ ವಿ.ರೆಡ್ಡಿ

LEAVE A REPLY

Please enter your comment!
Please enter your name here