ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಔಟ್!

0
195
Tap to know MORE!

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜನಪ್ರಿಯ ಪೇಮೆಂಟ್ ಆ್ಯಪ್ ಪೇಟಿಎಂ ಗೂಗಲ್ ಪ್ಲೇ ಸ್ಟೋರ್ ನಿಂದ ಮಾಯವಾಗಿದೆ! ಹೀಗಿದ್ದರೂ, ಪೇಟಿಎಂ ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್ ಮತ್ತು ಇತರ ಆ್ಯಪ್ ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.

ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದ್ದು, ಆ್ಯಪಲ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ.

UPDATE : ಪ್ಲೇ ಸ್ಟೋರ್ ನಲ್ಲಿ ಮತ್ತೆ ಪ್ರತ್ಯಕ್ಷವಾದ ಪೇಟಿಎಂ..! 

ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್‌ಡೇಟ್‌ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಹಣ ಮತ್ತು ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ” ಎಂದಿದೆ.

ಗೂಗಲ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಆ್ಯಪ್ ಅನ್ನು ತೆಗೆದುಹಾಕಲಾಗಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

“ಕೆಲವೊಂದು ಸಂಭಾವ್ಯ ಹಾನಿಯಿಂದ ಬಳಕೆದಾರರನ್ನು ರಕ್ಷಿಸಲು ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್‌ಗೆ ಮಾಹಿತಿ ನೀಡುತ್ತೇವೆ. ಆದರೇ ಆ್ಯಪ್ ಡೆವಲಪರ್ ಗಳು ಈ ನೀತಿಗಳನ್ನು ಅನುಸರಿಸದಿದ್ದರೇ ಪ್ಲೇಸ್ಟೋರ್ ನಿಂದ ಅವನ್ನು ತೆಗೆದುಹಾಕಲಾಗುವುದು. ಹೊಸ ನೀತಿಗಳನ್ನು ಅಳವಡಿಸಿಕೊಂಡರೇ ಮಾತ್ರ ಅಂತಹ ಆ್ಯಪ್ ಗಳಿಗೆ ಪ್ಲೇಸ್ಟೋರ್ ನಲ್ಲಿ ಜಾಗವಿರುತ್ತದೆ. ಅದಾಗ್ಯೂ 2ನೇ ಬಾರಿ ಗೂಗಲ್ ನಿಯಮ ಉಲ್ಲಂಘಿಸಿದರೇ ಹೆಚ್ಚು ಗಂಭೀರವಾದ ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ಮತ್ತು ಪ್ರೈವಸಿಯ ಉಪಾಧ್ಯಕ್ಷ ಸುಝಾನೆ ಫ್ರೇ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here