ಹಳೆಯಂಗಡಿ : ಯುವಕ ಮಂಡಲದಲ್ಲಿ “ಪೇಪರ್ ಕ್ರಾಫ್ಟ್ ಕಾರ್ಯಾಗಾರ”

0
148
Tap to know MORE!

ಹಳೆಯಂಗಡಿ:- ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ ಇದರ ಆಶ್ರಯದಲ್ಲಿ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ವಿದ್ಯಾ ವಿನಾಯಕ ರಜತಾಸೇವಾ ಟ್ರಸ್ಟ್ (ರಿ), ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾಮಂಡಲ (ರಿ) ಹಳೆಯಂಗಡಿ, ದ.ಕ ಇವರ ಸಹಕಾರದಲ್ಲಿ ಯುವಕ ಮಂಡಲದ ಸಭಾಂಗಣದಲ್ಲಿ ಪೇಪರ್ ಕ್ರಾಫ್ಟ್ ಕಾರ್ಯಾಗಾರವು ನಡೆಯಿತು.

“ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ನಿರಂತರ ಪ್ರೋತ್ಸಾಹ ನೀಡಿದಾಗ ಎಲೆಮರೆಯ ಪ್ರತಿಭೆಗಳು ಬೆಳಕಿಗೆ ಬರುತ್ತದೆ. ಕೋರೋನ ಸಂಕಷ್ಟ ಕಾಲದಲ್ಲಿ ಸ್ಥಳೀಯ ಮಕ್ಕಳಿಗೆ ನಿರಂತರ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ಮಕ್ಕಳಿಗೆ ಉತ್ತಮ ಸಮಯದ ಸದುಪಯೋಗ ಮಾಡಲು ಅನುವು ಮಾಡಿ ಕೊಡುತ್ತಿರುವ ಯುವಕ ಮಂಡಲದ ನಿರಂತರ ಕಾರ್ಯ ಶ್ಲಾಘನೀಯ ಎಂದು ಕಾರ್ಯಕ್ರಮ ಉದ್ಘಾಟಿಸಿದ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆ ಬಜಪೆ ಇದರ ಕಲಾ ಶಿಕ್ಷಕರು ಆಗಿರುವ ಶ್ರೀ ಯೋಗೀಶ್ ತಿಳಿಸಿದರು.

ಇದನ್ನೂ ಓದಿ: ಹಳೆಯಂಗಡಿ : ಸ್ಕಿಪ್ಪಿಂಗ್ ಮತ್ತು ಸೈಕಲ್ ಜಾಥಾ ಕಾರ್ಯಕ್ರಮ

ಈ ಸಂದರ್ಭದಲ್ಲಿ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್ ಇದರ ಕಲಾ ಶಿಕ್ಷಕರು ಆಗಿರುವ ಶ್ರೀ ಸುಹಾಸ್ ನಾಣಿಲ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಇದರ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚೀಲಿಂಬಿ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಇದರ ಪ್ರದಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿಕೊಸ್ತಾ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಭಾ ಕಾರ್ಯಕ್ರಮದ ನಂತರ ಶಿಕ್ಷಕರು, ಕಸದಿಂದ ರಸ ಎನ್ನುವಂತೆ ಪೇಪರ್, ಪ್ಲಾಸ್ಟಿಕ್, ಮತ್ತು ಇತರ ವಸ್ತುಗಳ ಮರುಬಳಕೆ ಹಾಗೂ ಉಪಯುಕ್ತ ವಸ್ತುಗಳ ತಯಾರಿ ಮಾಡುವ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಸ್ವಾಗತಿಸಿದರು. ಕು|ಪೂರ್ವಿಕ ಪ್ರಾರ್ಥನೆ ಸಲ್ಲಿಸಿದರು. ಯುವಕ ಮಂಡಲದ ಪ್ರದಾನ ಕಾರ್ಯದರ್ಶಿ ಶ್ರೀ ಇಂದೂಧರ ಕಿಣಿ ಧನ್ಯವಾದ ಅರ್ಪಿಸಿದರು. ಯುವಕ ಮಂಡಲದ ಸಮಿತಿ ಸದಸ್ಯರಾದ ಶ್ರೀ ಹಿತೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here