ವಿಕಾಶ್ ಕುಮಾರ್ ಮಂಗಳೂರು ನಗರಕ್ಕೆ ಹೊಸ ಪೊಲೀಸ್ ಆಯುಕ್ತರಾಗಿ ಬರಲಿದ್ದು, ಇಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರನ್ನು ವರ್ಗಾಯಿಸಲಾಗಿದೆ.
ಈ ವರ್ಗಾವಣೆಯನ್ನು ಸರ್ಕಾರ ಜೂನ್ 26 ರಂದು ಮಾಡಿದೆ.
ವಿಕಾಶ್ ಕುಮಾರ್ ಈ ಹಿಂದೆ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಮತ್ತು ಕಾರ್ಕಳದ ಆಂಟಿ ನಕ್ಸಲ್ ಫೋರ್ಸ್ ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಆದೇಶದಂತೆ ಡಾ.ಪಿ.ಎಸ್.ಹರ್ಷ ಅವರನ್ನು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರಿನ ಕಮಿಷನರ್ ಆಗಿ ನೇಮಕ ಮಾಡಲಾಗುತ್ತದೆ.
ಇವರೊಂದಿಗೆ ಒಟ್ಟು 13 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕ ಸರಕಾರ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೆ ಆದೇಶ ಹೊರಡಿಸಿದೆ. ಮಂಗಳೂರು ಕಮಿಷನರ್ ಸೇರಿದಂತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಈ ಅಧಿಕಾರಿಗಳನ್ನು ವರ್ಗಾವಣೆಗೊಳಸಲು ಆದೇಶಿಸಿದೆ.
ಬೆಳಗಾವಿ ಪೊಲೀಸ್ ಕಮಿಷನರ್ ಬಿ.ಎಸ್.ಲೋಕೇಶ್ಕುಮಾರ್, ಮಂಗಳೂರು ಕಮಿಷನರ್ ಆಗಿದ್ದ ಪಿ.ಎಸ್. ಹರ್ಷ, ವಾರ್ತಾ ಇಲಾಖೆ ಆಯುಕ್ತರಾಗಿದ್ದ ಎಸ್.ಎನ್.ಸಿದ್ದರಾಮಪ್ಪ, ಕೊಡಗು ಎಸ್ಪಿ ಸುಮನ್ ಪೆನ್ನೆಕರ್, ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡ್ಯ, ಚಾಮರಾಜನಗರ ಎಸ್ಪಿ ಎಚ್.ಡಿ.ಆನಂದ್ಕುಮಾರ್, ಪೊಲೀಸ್ ಇಲಾಖೆ ಆಡಳಿತ ವಿಭಾಗದ ಐಜಿಪಿ ಆಗಿದ್ದ ಸೀಮಂತ್ಕುಮಾರ್ ಸಿಂಗ್ ವರ್ಗಾವಣೆಗೊಂಡಿರುತ್ತಾರೆ