ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಹೋಗಿದ್ದ ಯುವಕನೊಬ್ಬ ಪ್ರವಾಸಿ ಮಂದಿರದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 25 ವರ್ಷ ವಯಸ್ಸಿನ ಶ್ರೀಮಂತ ಮಹಾದೇವ ಗಾಯಕವಾಡ ಆತ್ಮಹತ್ಯೆಗೆ ಶರಣಾದ ಯುವಕ.
ಸಂಜೀವ ಕುಮಾರ ಗಾಯಕವಾಡ ಎಂಬವರ ಜೊತೆ ಆರೋಪಿಯು ಬುಧವಾರ ಜಗಳವಾಡಿದ್ದ ಎನ್ನಲಾಗಿದೆ. ಈ ವೇಳೆ ಸಂಜೀವ ಕುಮಾರ ಗಾಯಕವಾಡ್ ಅವರಿಗೆ ಬ್ಲೇಡ್ನಿಂದ ಗಾಯಗೊಳಿಸಿದ್ದು, ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶ್ರೀಮಂತ ಗಾಯಕವಾಡ ಅವರನ್ನು ಪೊಲೀಸರು ವಿಚಾರಣೆಗಾಗಿ ಬುಧವಾರ ಕರೆತಂದಿದ್ದರು.
ರಾತ್ರಿ 1 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ನೆಪ ಹೇಳಿದ ಯುವಕ ಕತ್ತಲೆಯಲ್ಲಿ ಪರಾರಿಯಾಗಿ ಬಾವಿಗೆ ಹಾರಿದ್ದಾನೆ. ಪ್ರವಾಸಿ ಮಂದಿರದ ಬಳಿ ಇರುವ ಬಾವಿಯಲ್ಲಿ ಶವ ತೇಲುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ಡಿಎಸ್ಪಿ ಡಾ.ದೇವರಾಜ ಭೇಟಿ ನೀಡಿ ಪರೀಶೀಲನೆ ನಡೆಸಿದರು.