ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಮತ್ತು ಭ್ರಷ್ಟಾಚಾರ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಎಂದು ಕಾರಣ ಉಲ್ಲೇಖಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಅಭಿಷೇಕ್ ದೀಕ್ಷಿತ್ ಅವರನ್ನು ತಮ್ಮ ಹುದ್ದೆಯಿಂದ ಅಮಾನತುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
ರಾಜ್ಯ ಮಾಹಿತಿ ಇಲಾಖೆ ಹೊರಡಿಸಿರುವ ಹೇಳಿಕೆಯ ಪ್ರಕಾರ, ಅಭಿಷೇಕ್ ದೀಕ್ಷಿತ್ ಅವರು ಪ್ರಯಾಗರಾಜ್ನಲ್ಲಿ ಕಾರ್ಯ ನಿರ್ವಹಿಸುವಾಗ ಗಂಭೀರ ಆರೋಪಗಳನ್ನು ಹೊಂದಿದ್ದರು. ಅವರು ತಮ್ಮ ಕರ್ತವ್ಯದ ಸಮಯದಲ್ಲಿ ಹಲವಾರು ವೈಪರೀತ್ಯಗಳ ಆರೋಪಗಳನ್ನು ಹೊಂದಿದ್ದರು. ಹಾಗೆಯೇ, ಅವರು ಸರ್ಕಾರ ಮತ್ತು ಇಲಾಖೆಯ ಪ್ರಧಾನ ಕಚೇರಿಯಿಂದ ನೀಡಲಾದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸಲಿಲ್ಲ. ಅಭಿಷೇಕ್ ದೀಕ್ಷಿತ್ ಅವರು ಭ್ರಷ್ಟಾಚಾರವನ್ನೂ ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶ : ಬಾಲಕಿಯ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಿದ ಕಾಮುಕರು
“ನಿಯಮಿತವಾಗಿ ಬ್ಯಾಂಕುಗಳು ಮತ್ತು ಆರ್ಥಿಕ ವ್ಯಾಪಾರ ಸಂಸ್ಥೆಗಳಿಗೆ ಭದ್ರತೆ ಒದಗಿಸಲು, ಕಳ್ಳತನದ ಘಟನೆಗಳನ್ನು ತಡೆಯಲು ಸರ್ಕಾರ ಮತ್ತು ಪ್ರಧಾನ ಕಚೇರಿಯ ನಿರ್ದೇಶನದ ಪ್ರಕಾರ ಅವರು ನಿರೀಕ್ಷೆಯಂತೆ ಕರ್ತವ್ಯ ನಿರ್ವಹಿಸಲಿಲ್ಲ. ತಪಾಸಣೆ ಮತ್ತು ಮೇಲ್ವಿಚಾರಣೆಯ ಕೆಲಸವನ್ನೂ ಅವರು ಸರಿಯಾಗಿ ಮಾಡಲಿಲ್ಲ. ಅದಲ್ಲದೆ, ಪ್ರಯಾಗರಾಜ್ನಲ್ಲಿ ಕಳೆದ 3 ತಿಂಗಳಲ್ಲಿ ಬಾಕಿ ಉಳಿದಿರುವ ತನಿಖೆಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಸಹ ಜಿಲ್ಲೆಯಲ್ಲಿ ಸರಿಯಾಗಿ ಪಾಲಿಸಲಾಗಿಲ್ಲ ಮತ್ತು ಹೈಕೋರ್ಟ್ ಕೂಡ ಇದರ ಬಗ್ಗೆ ಅಸಮಾಧಾನವನ್ನು ತೋರಿಸಿದೆ ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.