ತೋಕೂರು : ಪೌಷ್ಟಿಕ ಆಹಾರದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ

0
144
Tap to know MORE!

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಲಬ್ ತೋಕೂರು, ಇದರ ಆಶ್ರಯದಲ್ಲಿ “ಪೌಷ್ಟಿಕ ಆಹಾರದ ಮಹತ್ವ” ಕುರಿತು ಜಾಗೃತಿ ಕಾರ್ಯಕ್ರಮವು ರವಿವಾರ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀ ರಘುವೀರ್ ಸೂಟರ್ ಪೇಟೆ (ಜಿಲ್ಲಾ ಯುವ ಸಮನ್ವಯ ಅಧಿಕಾರಿ, ನೆಹರು ಯುವ ಕೇಂದ್ರ ಮಂಗಳೂರು) “ಅವರು ಒಳ್ಳೆಯ ಪೌಷ್ಟಿಕ ಆಹಾರ ಸೇವನೆಯು ನಮ್ಮ ಉತ್ತಮ ಜೀವನ ಶೈಲಿಗೆ ಪೂರಕವಾಗಿದೆ. ಒಳ್ಳೆಯ ಆಹಾರದಿಂದ ಉತ್ತಮ ಆರೋಗ್ಯ ವೃದ್ಧಿಯಾಗಿ ಅನಾರೋಗ್ಯದಿಂದ ಬಿಡುಗಡೆ ಸಿಗುತ್ತದೆ. ಈ ಮೂಲಕ ಒಬ್ಬ ವ್ಯಕ್ತಿ ಒಂದು ಮನೆ ಒಂದು ಸಮಾಜ ಹಾಗೂ ಇಡೀ ದೇಶ ಆರೋಗ್ಯವಂತ ದೇಶವಾಗಿ ಇರಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಎನ್ನುವುದನ್ನು ಪರಿಚಯಿಸಿದರು” ಎಂದು ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ
ಡಾ| ಕೆ ಕೃಷ್ಣ (ಆಡಳಿತ ವೈದ್ಯಕೀಯ ಅಧಿಕಾರಿ, ಮತ್ತು ಮಕ್ಕಳ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ, ಮುಲ್ಕಿ ) ಅವರು “ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯ ಜೊತೆಗೆ ಯೋಗ, ನಡಿಗೆ, ವ್ಯಾಯಾಮ ಅತ್ಯಗತ್ಯ. ಈ ರೀತಿ ಯೋಜಿತ ಆಹಾರ ಸೇವನೆಯಿಂದ ನಾವು ಕಾಯಿಲೆ ಹಾಗೂ ವೈದ್ಯರನ್ನು ನಮ್ಮ ಜೀವನದಿಂದ ದೂರ ಇರಿಸಬಹುದು ಎಂದರು. ಮಾಂಸಹಾರ ಸೇವಿಸುವವರು ವಾರಕ್ಕೊಮ್ಮೆ ಸೇವಿಸಬೇಕು ಮತ್ತು ನಮ್ಮ ಆಹಾರದಲ್ಲಿ ಸೊಪ್ಪು ತರಕಾರಿ ದ್ವಿದಳ ಧಾನ್ಯ ಒಣಗಿದ ಹಣ್ಣುಗಳನ್ನು ಸೇವಿಸಬೇಕು” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ|ನಂದಿನಿ ( ಆರ್ನ ಕ್ಲಿನಿಕ್, ಹಳೆಯಂಗಡಿ) ಅವರು ಜಂಕ್ ಆಹಾರಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾರ್ಗರೇಟ್ ಸುದರ್ಶಿನಿ
(ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಅತ್ತೂರು-ಕೆಮ್ರಾಲ್ ) ಅವರು ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಇಂತಹ ಸಂಘ-ಸಂಸ್ಥೆಗಳಿಂದ ಮಾತ್ರ ಸಾಧ್ಯ,ಎಂದು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ. ಜಿ. ಕೆ, ಅಧ್ಯಕ್ಷರು ಸಂತೋಷ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಇದರ ಮಾಜಿ ಅಧ್ಯಕ್ಷರು ಶ್ರೀ ಮೋಹನದಾಸ್, ಕಾರ್ಯದರ್ಶಿ ಶ್ರೀ ಲೋಕನಾಥ್ ಭಂಡಾರಿ, ಸಂಸ್ಥೆಯ ಗೌರವ ಮಾರ್ಗದರ್ಶಕರು ಹಾಗೂ ಪತ್ರಕರ್ತ ಮಿತ್ರರು ಶ್ರೀ ನರೇಂದ್ರ ಕೆರೆಕಾಡು, ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಶ್ರೀ ದೀಪಕ್ ಸುವರ್ಣ, ಶ್ರೀ ಜಗದೀಶ್ ಕುಲಾಲ್,ಶ್ರೀ ಗಣೇಶ್ ದೇವಾಡಿಗ, ಶ್ರೀಸಂಪತ್ ದೇವಾಡಿಗ, ಶ್ರೀ ಪ್ರಶಾಂತ್ ಕುಮಾರ್ ಬೇಕಲ್,ಶ್ರೀ ಯೋಗೀಶ್ ಕೋಟ್ಯಾನ್,ಶ್ರೀ ಸುನಿಲ್ ದೇವಾಡಿಗ,ಶ್ರೀ ಗೌತಮ್ ಬೆಲ್ಚಡ್, ಶ್ರೀಮತಿ ಪ್ರಮೀಳಾ ಕೆ. ದೇವಾಡಿಗ, ಹಾಗೂ ಸಂಸ್ಥೆಯ ಸದಸ್ಯರು, ಮಹಿಳಾ ಸದಸ್ಯೆಯರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದರು.

ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ ಅವರು ಸ್ವಾಗತಿಸಿದರು, ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್ ವಂದಿಸಿದರು ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಕುಲಾಲ್ ಇವರು ಮಹಿಳಾ ಸದಸ್ಯೆಯರು ಮನೆಯಲ್ಲಿ ತಯಾರಿಸಿ ತಂದಂತಹ ಪೌಷ್ಟಿಕ ಆಹಾರದ ವಿವರಗಳನ್ನು ತಿಳಿಸಿದರು ಹಾಗೂ ಶ್ರೀಮತಿ ಗೀತಾ ಸದಾನಂದ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here