ಎಲ್ಲಾ ಪ್ಯಾಸೆಂಜರ್ ರೈಲುಗಳ ಓಡಾಟ ಸದ್ಯಕ್ಕಿಲ್ಲ : ಭಾರತೀಯ ರೈಲ್ವೇ ಸ್ಪಷ್ಟನೆ

0
374
Tap to know MORE!

ನವದೆಹಲಿ : ಪ್ಯಾಸೆಂಜರ್ ರೈಲುಗಳ ಸಂಚಾರ ಪುನಾರಂಭಿಸಲು ಯಾವುದೇ ದಿನಾಂಕ ನಿಗದಿಪಡಿಸಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ.

ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ದೇಶದ್ಯಾಂತ್ಯ ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು. ಬಳಿಕ ಹಂತ ಹಂತವಾಗಿ ಶೇಕಡಾ 65 ಕ್ಕಿಂತ ಹೆಚ್ಚು ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿತು. ಆದರೆ, ಹೊಸ ರೈಲು ಸೇವೆಗಳನ್ನು ಕ್ರಮೇಣ ಸೇರಿಸುವ ಚಿಂತನೆ ನಡೆಸಿದ್ದು, ಎಲ್ಲಾ ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆ ಪುನರಾರಂಭಕ್ಕೆ ಯಾವುದೇ ದಿನಾಂಕ ನಿಗದಿಪಡಿಸಲಾಗಿಲ್ಲ ಎಂದು ತಿಳಿಸಿದೆ.

ಭಾರತೀಯ ರೈಲ್ವೆ ಕಳೆದ ವರ್ಷ ಮಾರ್ಚ್ 23 ರಿಂದ ಎಲ್ಲಾ ಸಾಮಾನ್ಯ ಪ್ರಯಾಣಿಕರನ್ನು ಸಾಗಿಸುವ ರೈಲುಗಳನ್ನು ನಿಲ್ಲಿಸಿತು ಮತ್ತು ಪ್ರಸ್ತುತ ರಾಜ್ಯ ಸರ್ಕಾರಗಳ ಕಾಳಜಿ ಮತ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಪ್ಯಾಸೆಂಜರ್ ಮತ್ತು ಎಕ್ಸ್‍ಪ್ರೆಸ್ ರೈಲು ಸೇವೆಗಳನ್ನು ವೇಗಗೊಳಿಸಲು ನಿರ್ಧರಿಸಿದೆ, ಆ ಮೂಲಕ ಅವುಗಳನ್ನು ಕ್ರಮವಾಗಿ ಎಕ್ಸ್‍ಪ್ರೆಸ್ ಮತ್ತು ಸೂಪರ್‍ಫಾಸ್ಟ್ ಸೇವೆಗಳಾಗಿ ನವೀಕರಿಸಲಾಗಿದೆ. ಎಲ್ಲಾ ಅಂಶಗಳನ್ನು ಗಮನಹರಿಸಬೇಕಾಗಿದೆ ಮತ್ತು ಊಹಾಪೋಹಗಳನ್ನು ಜನರು ತಿಳಿದುಕೊಳ್ಳಬಾರದು ಎಂದು ಇಲಾಖೆ ಹೇಳಿದೆ.

LEAVE A REPLY

Please enter your comment!
Please enter your name here