ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಪರೀಕ್ಷೆ ನಡೆಸಲು ವಿವಿಗಳು ಮುಕ್ತ : ಸುಪ್ರೀಂಕೋರ್ಟ್

0
252
Tap to know MORE!

ಪದವಿ ಕೋರ್ಸ್‌ಗಳ ಪ್ರಥಮ ಮತ್ತು ದ್ವಿತೀಯ ವರ್ಷ ಮತ್ತು ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ತೇರ್ಗಡೆಗೊಳಿಸುವ ಸಲುವಾಗಿ ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯಗಳು ಮುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರ ತ್ರಿಎ ನ್ಯಾಯಪೀಠವು, “ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು, ವಿಶ್ವವಿದ್ಯಾಲಯಗಳ ವಿವೇಚನೆಗೆ ಬಿಟ್ಟಿದೆ. ಅವರು ಪರೀಕ್ಷೆಯನ್ನು ನಡೆಸಲು ಬಯಸಿದರೆ, ನಾವು ಅವರನ್ನು ತಡೆಯಲು ಸಾಧ್ಯವಿಲ್ಲ. ಇದು ನ್ಯಾಯಾಂಗ ಪರಿಶೀಲನೆಗೆ ಒಂದು ಆಧಾರವಲ್ಲ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಪರೀಕ್ಷೆ ನಡೆಸದೆ ಪದವಿ ನೀಡಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್

2020 ಏಪ್ರಿಲ್ 27 ರ ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಪದವಿ / ಸ್ನಾತಕೋತ್ತರ ಕೋರ್ಸ್‌ಗಳ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಸಂಪೂರ್ಣವಾಗಿ ಮೌಲ್ಯಮಾಪನ ಮಾಡಬೇಕಾಗಿದೆ ಎಂದು ಹೇಳಿರುವ ವಿದ್ಯಾರ್ಥಿ ಆಯುಷ್ ಯೇಸುದಾಸ್ ಸಲ್ಲಿಸಿದ ಪಿಐಎಲ್ ಅನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಗಸ್ಟ್ 14 ರ ತೀರ್ಪಿನ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರು ಇದನ್ನು ರಾಜ್ಯಕ್ಕೆ ಉಲ್ಲೇಖಿಸಿ, “COVID-19 ಭೀತಿಯ ನಡುವೆ ಪರೀಕ್ಷೆಗಳನ್ನು ನಡೆಸುವುದು ಯುಜಿಸಿ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತದೆ” ಎಂದಿದ್ದರು.

ಅರ್ಜಿಯನ್ನು ನ್ಯಾಯಪೀಠವು ವಜಾಗೊಳಿಸಿ, “ಈ ನ್ಯಾಯಾಲಯವು ಪ್ರತಿ ಕಾಲೇಜಿನ ಪರೀಕ್ಷೆಯ ಮೇಲ್ವಿಚಾರಣೆಯನ್ನು ಪ್ರಾರಂಭಿಸುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ. ಮತ್ತೊಂದೆಡೆ, ಪರೀಕ್ಷೆಯನ್ನು ನಡೆಸುವುದರಿಂದ ಯುಜಿಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತೆಯೂ ಆಗುವುದಿಲ್ಲ” ಎಂದಿದೆ.

ಏಪ್ರಿಲ್ 27 ಯುಜಿಸಿ ಮಾರ್ಗಸೂಚಿಗಳ ಪ್ರಕಾರ, “ಮಧ್ಯಂತರ ಸೆಮಿಸ್ಟರ್ / ವರ್ಷದ ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ನಡೆಸಬಹುದು. ಅವರ ಸನ್ನದ್ಧತೆಯ ಮಟ್ಟ, ವಿದ್ಯಾರ್ಥಿಗಳ ವಸತಿ ಸ್ಥಿತಿ, ವಿವಿಧ ಪ್ರದೇಶ / ರಾಜ್ಯಗಳಲ್ಲಿ ಹರಡುವ ಕೋವಿಡ್-19 ಸಾಂಕ್ರಾಮಿಕ ರೋಗದ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮೌಲ್ಯಮಾಪನ ಮಾಡಿದ ನಂತರ ಮತ್ತು ಇತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಶ್ವವಿದ್ಯಾಲಯಗಳು ಈ ಕುರಿತು ನಿರ್ಧಾರ ತೆಗೆಯಬಹುದು. ಕೋವಿಡ್-19 ರ ಭೀತಿಯಿಂದಾಗಿ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು, ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಅಂಕಗಳನ್ನು ನೀಡಬಹುದು ಎಂದಿತ್ತು.

LEAVE A REPLY

Please enter your comment!
Please enter your name here