ಪ್ರಧಾನಮಂತ್ರಿ ಎಲ್ಲಿ ಅಡಗಿದ್ದಾರೆ : ರಾಹುಲ್ ಗಾಂಧಿ ಪ್ರಶ್ನೆ

0
223
Tap to know MORE!

“ದೇಶದ ಪ್ರಧಾನಮಂತ್ರಿಯವರು ಏಕೆ ಮೌನ ತಾಳಿದ್ದಾರೆ? ಎಲ್ಲಿ ಅಡಗಿಕೊಂಡು ಕುಳಿತಿದ್ದಾರೆ ಅವರು?” ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

“ಏನಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ನಮ್ಮ ಸೈನಿಕರನ್ನು ಕೊಲ್ಲಲು ಚೀನಾ ದೇಶಕ್ಕೆ ಎಷ್ಟು ಧೈರ್ಯ? ಅವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅವರಿಗೆಷ್ಟು ಧೈರ್ಯ?” ಎಂದು ಪ್ರಧಾನಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.

ಭಾರತ ಮತ್ತು ಚೀನಾ ಸೇನೆಯ ನಡುವೆ ಲಡಾಖ್ ನಲ್ಲಿ ನಡೆದ ಘರ್ಷಣೆಯ ಸಂದರ್ಭ ಭಾರತದ ಸುಮಾರು ೨೦ ಸೈನಿಕರು ಹುತಾತ್ಮರಾಗಿದ್ದರು. ಈ ಕುರಿತು ಪ್ರಧಾನಮಂತ್ರಿಯವರು ಪ್ರತಿಕ್ರಿಯೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here