ಇಮೇಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದ್ದು, ರಾಷ್ಟ್ರೀಯ ತನಿಖಾ ದಳ ಇದನ್ನು ಪತ್ತೆ ಹಚ್ಚಿದೆ. ಈ ಮೇಲ್ ನಲ್ಲಿ Kill Narendra Modi ಎಂದು ಬರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಿದ ಬೆನ್ನಲ್ಲೇ ಇದೊಂದು ಆಘಾತಕಾರಿ ವಿಷಯವಾಗಿದ್ದು, ಗೃಹ ಸಚಿವಾಲಯ ಈ ಬೆದರಿಕೆ ಇ ಮೇಲ್ ನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಧಾನಿ ಮೋದಿಗೆ ರಕ್ಷಣೆ ನೀಡುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಚರ್ಚೆ ನಡೆಸಿದೆ.