ಪ್ರಧಾನಿ ಮೋದಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಯುಪಿಯ ಮಹಿಳೆ

0
213
Tap to know MORE!

ಆಗ್ರಾ: ”ದೇಶದ ಮಹಿಳೆಯರಿಗೆ ಅವರ ಮನೆಗಳಲ್ಲಿ ಸುರಕ್ಷತೆ ಒದಗಿಸಿ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನಗರದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋನಾ ದ್ವಿವೇದಿ (30) ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದವರು.

ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದಿರುವ ಮೂರು ಪುಟಗಳ ಪತ್ರವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬ ಸದಸ್ಯರಿಗೆ ವಾಟ್ಸ್ಯಾಪ್‌ನಲ್ಲಿ ಮೋನಾ ಕಳುಹಿಸಿದ್ದಾರೆ. ತನ್ನ ಮೈದುನರಾದ ಅಂಬುಜ್‌ ಮತ್ತು ಪಂಕಜ್‌ ನೀಡುತ್ತಿದ್ದ ದೈಹಿಕ ಹಿಂಸೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿಸಿದ್ದಾರೆ.

ನಿತ್ಯವೂ ಹಿಂಸೆ ನೀಡುತ್ತಿದ್ದ ಮೈದುನರು, ಯಾರ ಬಳಿಯಾದರೂ ಹೇಳಿದರೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದರು. ಪತಿಯ ಬಳಿ ಹೇಳಿದರೆ ಅವರು ನನ್ನನ್ನೇ ತೊರೆಯಬಹುದೆಂದು ಭಯವಾಗಿತ್ತು. ಹೀಗಾಗಿ ಅವರಿಗೂ ಹೇಳಲಿಲ್ಲ. ದಯವಿಟ್ಟು ಮಹಿಳೆಯರಿಗೆ ಅವರ ಮನೆಗಳಲ್ಲಿಯೇ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ,” ಎಂದು ಮೋನಾ ಅವರು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

LEAVE A REPLY

Please enter your comment!
Please enter your name here