ಪ್ರಧಾನಿ ಮೋದಿ ಜೀವನಚರಿತ್ರೆ ಆಧರಿತ ಚಿತ್ರವನ್ನು ನಿರ್ಮಿಸುವ ಮೂಲಕ ಸುದ್ದಿಯಾಗಿದ್ದ ನಿರ್ಮಾಪಕ ಸಂದೀಪ್ ಎಸ್ಸಿಂಗ್ ವಿರುದ್ಧ ಡ್ರಗ್ಸ್ ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು, ಸಿಂಗ್ ವಿರುದ್ಧ ಈ ತನಕ ವಿರುದ್ಧ ಸಾಕಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಸಂದೀಪ್ ಸಿಂಗ್ ವಿರುದ್ಧ ಸಿಬಿಐ ತನಿಖೆಗೆ ಮುಂದಾಗಿದ್ದು. ಈತನಿಗೆ ಬಿಜೆಪಿಯೊಂದಿಗೆ ಏನು ಸಂಬಂಧವಿದೆ. ಅದೇ ರೀತಿ ಬಾಲಿವುಡ್ನೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದ್ದ ಎನ್ನುವುದರ ಬಗ್ಗೆ ತನಿಖೆ ಮಾಡುವ ಅಗತ್ಯವಿದೆ ಎಂದು ದೇಶ್ಮುಖ್ ಹೇಳಿದ್ದಾರೆ.