ಹದಿಹರೆಯದಲ್ಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಯುವಕ ಪ್ರಪುಲ್ಲಾ ಚಂದ್ರ ಚಾಕಿ

0
279
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಕೀಯರ ಗುಲಾಮತನದ ಸಾವಿಗಿಂತ ಆತ್ಮಹತ್ಯೆಯೇ ಮೇಲೆಂದು ನಂಬಿ ಅದೇಷ್ಟೋ ಜನ ವೀರರು ದೇಶಕ್ಕಾಗಿ ಪ್ರಾಣ ತೆತ್ತರು ಅಂತವರಲ್ಲಿ ಪ್ರಪುಲ್ಲಾ ಚಂದ್ರ ಚಾಕಿ ಒಬ್ಬರು.

ಪ್ರಪುಲ್ಲಾ ಚಾಕಿ 1880ರ ಡಿಸೆಂಬರ್ 10 ರಂದು ರಾಜನಾರಾಯಣ್ ಮತ್ತು ಸ್ವರ್ಣಮೊಯಿ ದೇವಿ ದಂಪತಿಗಳ ಮಗನಾಗಿ ಬಿಹಾರದಲ್ಲಿ ಜನಿಸಿದರು. ಬೋಗ್ರಾದ ಇಂಗ್ಲಿಷ್ ಮಾಧ್ಯಮ ಶಾಲೆಯಾದ ನಮುಜಾ ಜನದ ಪ್ರಸಾದ್ ಇಂಗ್ಲಿಷ್ ಶಾಲೆಯಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಅವರು ತಮ್ಮ ಹಿರಿಯ ಸಹೋದರ ಪ್ರತಾಪ್ ಚಂದ್ರ ಚಾಕಿಯೊಂದಿಗೆ ರಂಗ್‌ಪುರಕ್ಕೆ ಬಂದರು.

ಇದನ್ನೂ ಓದಿ: ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ಪಡೆದ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್

ಅವರ ಮಾವ ರಂಗ್‌ಪುರದಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದರು. ಪೂರ್ವ ಬಂಗಾಳ ಕಾನೂನನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು 9ನೇ ತರಗತಿಯ ರಂಗ್‌ಪುರ ಜಿಲ್ಲಾ ಶಾಲೆಯಿಂದ ಹೊರಹಾಕಲಾಯಿತು. ನಂತರ ಅವರು ರಂಗ್ಪುರ ರಾಷ್ಟ್ರೀಯ ಶಾಲೆಗೆ ಸೇರಿದರು, ಅಲ್ಲಿ ಅವರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ಕ್ರಾಂತಿಕಾರಿ ತತ್ತ್ವಚಿಂತನೆಗಳ ನಂಬಿಕೆಯುಳ್ಳ ಸಾಧಕರಾದರು. ಅವರು ಕುದುರೆ ಸವಾರಿ ಮತ್ತು ಈಜುವುದನ್ನು ಇಷ್ಟಪಡುತ್ತಿದ್ದರು. ಅವರು ಪ್ರಸಿದ್ಧ ಕುಸ್ತಿಪಟು, ಲಾಠಿಖಲೋವರ್ (ಸ್ಟಿಕ್-ಫೈಟರ್)ಕೂಡ ಆಗಿದ್ದರು. ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬರಿನ್ ಘೋಷ್ ಅವರು ಪ್ರಫುಲ್ಲಾ ಅವರನ್ನು ಕೋಲ್ಕತ್ತಾಗೆ ಕರೆತಂದರು ಮತ್ತು ಅವರನ್ನು ಜುಗಂತರ್ ಪಕ್ಷಕ್ಕೆ ಸೇರಿಸಲಾಯಿತು. ಮುಂದೆ, ಬಿಹಾರದ ಮುಜಾಫರ್ಪುರದ ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫೋರ್ಡ್‌ನ ಹತ್ಯೆಗೆ ಖುದಿರಾಮ್ ಬೋಸ್ ಜೊತೆಗೆ ಪ್ರಫುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.

ಈ ವಿಚಾರ ತಿಳಿದ ಬ್ರಿಟಿಷ್ ಸರ್ಕಾರ ಅವನನ್ನು ಮುಜಾಫರ್ ನಗರಕ್ಕೆ ವರ್ಗಾಯಿಸುತ್ತಾರೆ. ಆದರೂ ಬುದ್ದಿ ಕಲಿಯದ ಕಿಂಗ್ಸ್ ಪೋರ್ಡ್ ಭಾರತಿಯರ ವಿರುದ್ಧ ಅಮಾನುಷ ತೀರ್ಪು ನೀಡುತ್ತಿರುತ್ತಾನೆ. ಹೇಗಾದರು ಇವನನ್ನು ಹತ್ಯೆ ಮಾಡಲೇಬೇಕೆಂದು ನಿರ್ಧರಿಸಿದ ಕ್ರಾಂತಿಕಾರಿಗಳು ಈ ಕೆಲಸವನ್ನು ಖುದಿರಾಮ್ ಮತ್ತು ಪ್ರಫುಲ್ಲಾ ಚಾಕಿಗೆ ವಹಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಂದು 1908 ಎಪ್ರಿಲ್ 30 ರ ರಾತ್ರಿಯ ಸಮಯ ಖುದಿರಾಮ್ ಮತ್ತು ಪ್ರಫುಲ್ಲರಿಬ್ಬರು ಮುಜಾಫರ್ ನಗರದ ಯುರೋಪಿಯನ್ ಕ್ಲಬ್ನಲ್ಲಿ ಬಾಂಬ್ ಮತ್ತು ರಿವಲ್ ವಾರ್ ಹಿಡಿದುಕೊಂಡು ಕಾಯುತ್ತಿರುತ್ತಾರೆ.ಕಿಂಗ್ಸ್ ಪೋರ್ಡ್ ನ ಕುದುರೆ ಗಾಡಿ ಬರುತ್ತಿದ್ದಂತೆ ಖುದಿರಾಮ್ ಕೈಯಲ್ಲಿದ್ದ ಬಾಂಬ್ ಎಸೆಯುತ್ತಾನೆ.ಅದು ಬ್ರಿಟಿಷರ ವಿರುದ್ಧ ಭಾರತೀಯನೊಬ್ಬ ಎಸೆದ ಮೊದಲ ಬಾಂಬ್ ಆಗಿತ್ತು. ಬಾಂಬ್ ಸಿಡಿಯುತ್ತಿದ್ದಂತೆ ಗಾಡಿ ಚಿದ್ರವಾಗಿ ಹೋಗಿತ್ತು.ಖುದಿರಾಮ್ ಮತ್ತು ಪ್ರಫುಲ್ಲರು ಒಂದೊಂದು ದಿಕ್ಕಿಗೆ ಓಡುತ್ತಾರೆ ಆ ದಿನ ಕಿಂಗ್ಸ್ ಪೋರ್ಡ್ನ ಅದೃಷ್ಟ ಚೆನ್ನಾಗಿತ್ತು. ಆ ಗಾಡಿಯಲ್ಲಿ ಅವನಿರಲ್ಲಿಲ್ಲ. ಬದಲಾಗಿ ಅವನ ಸಂಬಂಧಿ ಇಬ್ಬರು ಮಹಿಳೆಯರು ಸಾವನ್ನಪ್ಪಿದರು.
ಮುಜಾಫರ್ ಪುರದಿಂದ 25 ಮೈಲುಗಳಾಚೆ ಜನರ ನಂಬಿಕೆ ದ್ರೋಹದ ಪರಿಣಾಮವಾಗಿ ಖುದಿರಾಮ್ ಬಂಧಿತನಾಗಿದ್ದ. ಇತ್ತ ಪ್ರಫುಲ್ಲಾ ಚಾಕಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ ತನ್ನ ರಿವಲ್ ವಾರ್ ನಿಂದ ಗುಂಡು ಹೊಡೆದುಕೊಂಡ. ಹೀಗೆ ದೇಶದ ಸ್ವತಂತ್ರ್ಯಕ್ಕಾಗಿ ಪ್ರಾಣವರ್ಪಿಸಿದ ಸ್ವಾಭಿಮಾನಿ ಯುವಕನೊಬ್ಬ ಕೇವಲ ತನ್ನ 19ನೇ ವರ್ಷಕ್ಕೆ ಅಮರನಾದ.

ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕ್ರಾಂತಿಕಾರಿ ರಾಮ್‌ಪ್ರಸಾದ್ ಬಿಸ್ಮಿಲ್

LEAVE A REPLY

Please enter your comment!
Please enter your name here