ಪ್ರೀತಿ ಎಂಬ ಮಾಯಲೋಕದಲ್ಲಿ ತೇಲಿ ಹೋದೆ ನಾ

0
70
Tap to know MORE!

ಈ ಪ್ರೀತಿ ತುಂಬಾ ವಿಚಿತ್ರ. ಯಾವಾಗ ಎಲ್ಲಿ ಹೇಗೆ ಯಾವ, ಸಂದರ್ಭದಲ್ಲಿ ಪ್ರೀತಿ ಹುಟ್ಟುತ್ತೆ ಹೇಳೋಕಾಗಲ್ಲ, ಪ್ರೀತಿಯಲ್ಲಿ ನಂಬಿಕೆ ಮತ್ತು ವಿಶ್ವಾಸವಿರಬೇಕು. ಇಲ್ಲವಾದಲ್ಲಿ ಆ ಎರಡು ಪದಗಳಿಗೆ ಆರ್ಥವಿರುವುದಿಲ್ಲ. ಪ್ರೀತಿ ಮಾಡಿದವರ ಜೊತೆ ಸಂತೋಷವಾಗಿ ಇರಬೇಕು ಅಂದುಕೊಳ್ಳುತ್ತೇವೆ. ಆದ್ರೆ ಪ್ರತಿ ದಿನ ಆ ಖುಷಿ ನಮ್ಮ ಸಂಬಂಧವನ್ನು ಗಟ್ಟಿ ಮಾಡಿಸುವ ಬದಲು ಹೊಡೆದು ಹಾಕುತ್ತದೆ.

ಪ್ರೀತಿಯೊಂದು ಸುಂದರವಾದ ಪದ. ಆದ್ರೆ ಆದರಲ್ಲಿ ಆನುಭವಿಸುವವರಿಗೇನೇ ಗೊತ್ತು ಆ ನೋವು ಎಂಥಹದು ಅಂತ. ಪ್ರೀತಿಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಗುತ್ತದೆ. ಹಾಗೇನೇ ಮನಃಸ್ಥಾಪ ಸಹ ಉಂಟು ಮಾಡುತ್ತದೆ. ಎರಡು ಜೀವಗಳು ಪ್ರೀತಿಯಲ್ಲಿ ತೇಲಾಡಿ ಸುಂದರ ಕ್ಷಣಗಳನ್ನು ಅನುಭವಿಸುವ ಮೊದಲೇ ಎರಡು ಹೃದಯಗಳ ಮನಸಲ್ಲಿ ಬಿರುಕು ಬೀಳುತ್ತದೆ.

ಸಣ್ಣಪುಟ್ಟ ಜಗಳ, ಸಿಕ್ಕಾಪಟ್ಟೆ ಪ್ರೀತಿ – ಇದು ಅಣ್ಣ ತಂಗಿ ಸಂಬಂಧದ ಸಾರ!

ಪ್ರೀತಿಯೆಂದರೇನೇ ಹಾಗೆ ಸಂಬಂಧಗಳಲ್ಲಿ ಅನುಮಾನಗಳು ಬರೋದು ಸಹಜನೆಷ ಪ್ರೀತಿ ಮಾಡುವವರಲ್ಲಿ ತಾಳ್ಮೆ ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ಏನೇ ಸಮಸ್ಯೆ ಬಂದರೂ ಸಮಾನ ರೀತಿಯಲ್ಲಿ ಸಾಗಿಸುತ ಹೋಗಬೇಕು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿರಬೇಕೇ ಹೊರತು, ಬಿಟ್ಟು ಹೋಗೋ ನಿರ್ಧಾರ ಮಾಡುವುದಲ್ಲ. ಸಂಬಂಧ ಕಳಚಿ ಬೀಳುತ್ತದೆ ಎಂದು ಗೊತ್ತಾದಾಗ ಅದನ್ನ ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಗೆ ತರಬೇಕಾದ ಪ್ರಯತ್ನ ಒಬ್ಬ ಹುಡುಗ ಅಥವಾ ಹುಡುಗಿಯಿಂದ ಆಗಬೇಕು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅದು ಬಿಟ್ಟು ಒಬ್ಬರ ಮೇಲೆ ಇನ್ನೊಬ್ಬರು ಮುನಿಸಿಕೊಳ್ಳುವುದಲ್ಲ. ಮಾತು ಬಿಟ್ಟಾಗ ಇಬ್ಬರಲ್ಲಿ ಒಬ್ಬರು ಸಮಾಧಾನಪಡಿಸಬೇಕು. ತಾನು ಪ್ರೀತಿಸುವ ಹುಡುಗಿ – ಹುಡುಗ ಇನ್ನೊಬ್ಬರ ಮಾತಿಗೆ ಕಿವಿಗೊಡದೆ ಸಮಾನ ರೀತಿಯಲ್ಲಿ ಅರ್ಥ ಮಾಡಿಕೊಂಡು ನಮ್ಮಿಬ್ಬರ ಪ್ರೀತಿ ಏನೂ ಕಮ್ಮಿ ಇಲ್ಲ ಎಂದು ತೋರಿಸಬೇಕು. ನಂಬಿಕೆ ಪ್ರೀತಿಯ ಒಂದು ಭಾಗ ಆ ನಂಬಿಕೆ ಬಿದ್ದು ಹೋದರೆ ಮತ್ತೆ ಎಂದು ಹುಟ್ಟುವುದಿಲ್ಲ.

ಕಾವ್ಯ.ಕೆ.
ಆಳ್ವಾಸ್ ಕಾಲೇಜು ಮೂಡುಬಿದಿರೆ

LEAVE A REPLY

Please enter your comment!
Please enter your name here