ಎರಡು ವರ್ಷಗಳ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

0
182
Tap to know MORE!

ಯಾದಗಿರಿ : ಎರಡು ವರ್ಷಗಳ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗೊಂದಡಗಿ ಗ್ರಾಮದ ಹನುಮಂತ (25) ಮತ್ತು ಮಹಾದೇವಿ (18) ಆತ್ಮಹತ್ಯೆ ಮಾಡಿಕೊಂಡವರು.

ಅಟೋ ಚಾಲಕನಾಗಿದ್ದ ಹನುಮಂತ ಮತ್ತು ಮಹಾದೇವಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದ ಇವರ ಪ್ರೇಮಕ್ಕೆ ಪೋಷಕರು ಅಡ್ಡಿಪಡಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಇವರು ಸೆಪ್ಟೆಂಬರ್ 8 ನೇ ತಾರೀಕಿನಂದು ಮನೆ ಬಿಟ್ಟು ತೆರಳಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ: ಡೆತ್‌ನೋಟ್ ಬರೆದಿಟ್ಟು 10 ತಿಂಗಳ ಮಗುವಿನ ತಾಯಿ ಆತ್ಮಹತ್ಯೆ

ಬುಧವಾರ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಪ್ರೇಮಿಗಳು ತಮ್ಮ ಕುಟುಂಬ ಹಾಗೂ ತಂದೆ, ತಾಯಿಯರ ಕ್ಷಮೆ ಕೇಳಿದ್ದಾರೆ.

ಇಬ್ಬರ ಮೃತದೇಹಗಳು ನೀರಿನಲ್ಲಿ ಮೇಲೆ ತೇಲಿದಾಗ ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ. ಸೈದಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here