‘ಪ್ರೇಮಿಗಳ ದಿನದ ಪ್ರಯುಕ್ತ 5 ದಿನ ರಜೆ ಕೊಡಿ ಸರ್’ – ಬಿ.ಕಾಂ ವಿದ್ಯಾರ್ಥಿ ಬರೆದ ಪತ್ರ ವೈರಲ್..!

0
136
Tap to know MORE!

ಚಾಮರಾಜನಗರ, ಫೆಬ್ರವರಿ 11: ಫೆಬ್ರುವರಿ 14 ರಂದು ಪ್ರೇಮಿಗಳ. ಇದಕ್ಕಾಗಿ ಐದು ದಿನಗಳ ಕಾಲ ರಜೆ ಕೊಡಿ‌ ಸರ್ ಎಂದು ಕೊಳ್ಳೇಗಾಲದ ಬಿಕಾಂ ವಿದ್ಯಾರ್ಥಿಯು ಕಾಲೇಜಿನ ಪ್ರಾಂಶುಪಾಲರಿಗೆ ಬರೆದಿರುವ ರಜಾ ಅರ್ಜಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್​​ ಆಗಿದೆ.

ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ‌ ಶಿವರಾಜು ಎಸ್. ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ಅರ್ಜಿ ಇದೆ. ಪ್ರೇಮಿಗಳ‌ ದಿನ ಹತ್ತಿರ ಬರುತ್ತಿದ್ದು ನನಗೆ ‌ಹುಡುಗಿಯರ ಕಾಟ ತಡೆಯಲು ಆಗುತ್ತಿಲ್ಲ, ಹಾಗಾಗಿ 5 ದಿನ ರಜೆ ಬೇಕೆಂದು‌ ಫೆಬ್ರವರಿ 9ರಂದು ಈ ಅರ್ಜಿ ಬರೆಯಲಾಗಿದೆ.

ಇದನ್ನೂ ಓದಿ: ಭಾರೀ ವೈರಲ್ ಆಗಿದೆ ಶಾರದೆ ಮತ್ತು ಕಾಳಿ ಫೋಟೋಗ್ರಫಿ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ರಜೆ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅರ್ಜಿಯಲ್ಲಿ ಪ್ರಾಂಶುಪಾಲ ಸೀಗ ನಾಯಕ ಅವರ ಸಹಿ ಮತ್ತು ಮೊಹರೂ ಇದೆ. ಈ ಬಗ್ಗೆ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು, “ತನ್ನ ಸಹಿಯನ್ನು ಯಾರೋ ನಕಲಿ‌ ಮಾಡಿ, ಮೊಹರನ್ನು ಕದ್ದು ಹಾಕಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here