ಪ್ಲೇ ಸ್ಟೋರ್ನ ನಿಯಮವನ್ನು ಮೀರಿದ ಕಾರಣಕ್ಕಾಗಿ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲೇ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ. ಮಾತ್ರವಲ್ಲದೆ, ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಗೂಗಲ್ ಪ್ಲೇ ಸ್ಟೋರ್ ಆನ್ಲೈನ್ ಕ್ಯಾಸಿನೋ, ಜೂಜು ಅಥವಾ ಬೆಟ್ಟಿಂಗ್ ಕುರಿತಾದ ಆ್ಯಪ್ಗಳನ್ನು ಪ್ರೊತ್ಸಾಹಿಸುವುದಿಲ್ಲ. ಮಾತ್ರವಲ್ಲದೆ, ಜಾಹೀರಾತು ಮತ್ತು ಥರ್ಡ್ ಪಾರ್ಟಿ ಆ್ಯಪ್ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗಿರುವ ಕಾರಣಕ್ಕೆ ತೆಗೆದು ಹಾಕಿತ್ತು. ಇದೀಗ ಅವೆಲ್ಲವನ್ನು ಸರಿಪಡಿಸಿಕೊಂಡು ಪೇಟಿಯಂ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ.
ಆನ್ಲೈನ್ ಪೇಮೆಂಟ್ ಸೇವೆಯನ್ನು ಒದಗಿಸುವ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ. ಆ ಮೂಲಕ ಬಳಕೆದಾರರ ಮನದಲ್ಲಿ ಮಂದಹಾಸ ಮೂಡಿಸಿದೆ.