ಭಾರೀ ವೈರಲ್ ಆಗಿದೆ ಶಾರದೆ ಮತ್ತು ಕಾಳಿ ಫೋಟೋಗ್ರಫಿ

0
208

ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ ಹಲವರ ಜೀವನದಲ್ಲಿ ಬದಲಾವಣೆಗಳನ್ನು ತಂದಿದೆ. ಎಲ್ಲವೂ ಬಂದ್‌ ಆಗಿದ್ದ ಸಂದರ್ಭದಲ್ಲಂತೂ, ಯಾವುದೇ ಕೆಲಸಗಳಿಲ್ಲದೇ, ತಮ್ಮದೇ ಆದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ತಮ್ಮಲ್ಲಿ ಅಡಗಿಕೊಂಡಿದ್ದ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಡಾಲ್ಗೋನಾ ಕಾಫಿಯಿಂದ ಹಿಡಿದು ಪೌರಾಣಿಕ ಪಾತ್ರಗಳ ವೇಷಗಳನ್ನು ಧರಿಸಿ ಜನಮನ್ನಣೆಗಳಿಸಿದ ಕಲಾಕಾರರೂ ಇದ್ದಾರೆ. ಅಂತಹ ಸಾಲಿಗೆ ಈಗ ಹೊಸ ಸೇರ್ಪಡೆ, ಮಂಗಳೂರಿನ ಶೀತಲ್‌ ನಾಯಕ್‌ ಮತ್ತು ಸುರತ್ಕಲ್‌ ಮೂಲದ ಪ್ರೀತಿ ಶೆಣೈ. ಕಾಳಿ ಹಾಗೂ ಶಾರದೆ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ ಮಂಗಳೂರಿನ ಯುವಕರ ತಂಡದ ಫೋಟೋಗ್ರಫಿ

ಕಾಳಿ ರೂಪದಲ್ಲಿ ಕಾಣಿಸಿಕೊಂಡಿರುವ ಶೀತಲ್‌ ನಾಯಕ್‌ ಮಂಗಳೂರು ಮೂಲದವರು. ಕೋಸ್ಟಲ್‌ವುಡ್‌ ನಟಿಯಾಗಿರುವ ಇವರು, ಪ್ರಸ್ತುತ ಎಂ.ಕಾಂ ಸ್ನಾತ್ತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ದಬಕ್‌ ದಬಾ ಐಸಾ, ಕುದ್ಕನ ಮದಿಮೆ, ವಿಕ್ರಾಂತ್‌, ಬೋಜರಾಜ್‌ ಎಂಬಿಬಿಎಸ್‌ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪದವಿ ವ್ಯಾಸಾಂಗ ಮಾಡುತ್ತಿದ್ದ ಸಮಯದಲ್ಲಿ ಡೈಜಿವರ್ಲ್ಡ್‌ ಚಾನಲ್‌ನಲ್ಲಿ ವಿಜೆಯಾಗಿದ್ದರು. “ನನಗೆ ಚಿತ್ರನಟನೆಯ ಅನುಭವವಿದ್ದರೂ, ಇದು ಹೊಸ ಅನುಭವ. ಅದರಲ್ಲೂ ಕಾಳಿ ರೂಪದಲ್ಲಿ ನಾನು ಹೇಗೆ ಕಾಣುತ್ತೇನೋ, ಆ ಪಾತ್ರಕ್ಕೆ ಎಷ್ಟು ಜೀವ ತುಂಬಬಲ್ಲೆ ಎಂದೆಲ್ಲಾ ಗಾಬರಿಯಾಗಿತ್ತು. ಆದರೆ, ನಮ್ಮ ಇಡೀ ತಂಡದ ಶ್ರಮ ಮತ್ತು ನಿರಂತರ ಪ್ರೋತ್ಸಾಹದಿಂದಾಗಿ ಚಿತ್ರಗಳು ಅದ್ಭುತವಾಗಿ ಮೂಡಿ ಬಂದಿದೆ” ಎನ್ನುತ್ತಾರೆ ಶೀತಲ್‌ ನಾಯಕ್.

Happy Navratri | Youth of GSB Exclusive | See now and Appreciate their work

Cast:
Makeover team:
Artistry By Priya…

Posted by Youth of GSB on Saturday, 17 October 2020

ಹಾಗೆಯೇ, ಶಾರದೆಯಾಗಿ ಕಾಣಿಸಿರುವ ಪ್ರೀತಿ ಶೆಣೈ ಮಂಗಳೂರಿನ ಸುರತ್ಕಲ್‌ ಮೂಲದವರು. ವೃತ್ತಿಯಲ್ಲಿ ಡೆಂಟಿಸ್ಟ್ ಆದರೂ ನೃತ್ಯ ಹಾಗೂ ಮಾಡಲಿಂಗ್‌ ಕ್ಷೇತ್ರದಲ್ಲಿ ಬಹಳ ಆಸಕ್ತಿ. ಗುರು ವಿದ್ಯಾಶ್ರೀ ರಾಧಾಕೃಷ್ಣರ ಮಾರ್ಗದರ್ಶನದಲ್ಲಿ, ಭರತನಾಟ್ಯಂ ವಿದ್ವತ್‌ ಪೂರ್ಣಗೊಳಿಸಿರುವ ಇವರು, ರಾಜ್ಯಮಟ್ಟದಲ್ಲಿ ೬ನೇ ರ್ಯಾಂಕ್‌ ಹಾಗೂ ಮಂಗಳೂರಿಗೆ ಮೊದಲ ರ್ಯಾಂಕ್‌ ಗಳಿಸಿದ್ದಾರೆ. ಈ ಕುರಿತು ಮಾತನಾಡಿದ ಪ್ರೀತಿ, “ಪ್ರಿಯಾರವರು ನನಗೆ ಈ ಬಗ್ಗೆ ಹೇಳಿದಾಗ ಮೊದಲು ಭಯ ಆಗಿತ್ತು. ನಾನು ಭರತನಾಟ್ಯ ಕ್ಷೇತ್ರದಲ್ಲಿದ್ದರೂ, ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೇನಾ ಎಂದು ನನಗೇ ಸಂಶಯವಾಗಿತ್ತು. ಬಳಿಕ ಫೋಟೋ ತೆಗೆಯುತ್ತಿದ್ದ ಸಂದರ್ಭವೂ, ಮೈಮೇಲೆ ಹೂವು ಮತ್ತು ಸೀರೆ ಭಾರವೆನಿಸಿದರೂ ಸಹ, ಆದರೆ ಹೆತ್ತವರ ಮತ್ತು ಇಡೀ ತಂಡದ ಪ್ರೋತ್ಸಾಹದಿಂದಾಗಿ, ಚೆನ್ನಾಗಿ ಮೂಡಿಬಂದಿದೆ”.

ಒಂದು ಉತ್ಸಾಹ ಭರಿತ ತಂಡವು ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ, ಯಾವ ಮಟ್ಟದ ಫಲಿತಾಂಶ ಬರಬಹುದು ಎಂಬುವುದಕ್ಕೆ ಸ್ಪಷ್ಟ ನಿದರ್ಶನ ಮಂಗಳೂರಿನ ಈ ತಂಡ. ಪ್ರಿಯಾ ಬಾಳಿಗಾ ನೇತೃತ್ವದ ಮೇಕ್‌ಅಪ್‌ ತಂಡ ಮತ್ತು ಪ್ರಸಾದ್‌ ಪೈ ನೇತೃತ್ವದ ಫೋಟೋಗ್ರಾಫಿ ತಂಡದ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಕೃಷ್ಣಾಷ್ಟಮಿ ಸಂದರ್ಭ ಕೃಷ್ಣ ವೇಷಧಾರಿ ಮಕ್ಕಳನ್ನು ಕಂಡ ಕೆಲವರು, ನನ್ನಲ್ಲಿ ನವರಾತ್ರಿಯ ಸಂದರ್ಭ ನವದುರ್ಗೆಯರಂತೆ ಮೇಕ್‌ಅಪ್‌ ಮಾಡಿಸಬಹುದಲ್ವಾ ಎಂದು ಕೇಳಿದ್ದರು. ಆಗ ನನ್ನಲ್ಲೂ ಈ ಕುರಿತು ಉತ್ಸಾಹ ಬಂದು, ನಮ್ಮ ಕೈಲಾದಷ್ಟು ಉತ್ತಮ ರೀತಿಯಲ್ಲಿ ಇಬ್ಬರನ್ನೂ ಹೊರತಂದಿದ್ದೇವೆ” ಎನ್ನುತ್ತಾರೆ ಪ್ರಿಯಾ ಬಾಳಿಗ.

ಛಾಯಾಗ್ರಹಣದಲ್ಲಿ ಕಂಡು ಬರುವ ವಿಶೇಷ ಆಕರ್ಷಣೆ ಎಂದರೆ ಅದು ಶಾರದೆಯ ವಿಸರ್ಜನೆಯ ಪ್ರತಿರೂಪಗಳು. ಪ್ರಸಾದ್ ಪೈಯವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಿತ್ರಗಳು ಜನಮನ್ನಣೆಗಳಿಸಿದೆ. ಶಾರದೆಯ ರೂಪದಲ್ಲಿ ಕಾಣಿಸಿಕೊಂಡಿರುವ ಪ್ರೀತಿ, ಈಜಲು ಬರುವುದಿಲ್ಲ ಎಂದು ನೀರಿನಲ್ಲಿ ಇಳಿಯಲು ಆರಂಭದಲ್ಲಿ ಹಿಂಜರಿದಿದ್ದರು. ಆದರೂ, ನಮ್ಮ ತಂಡದ ಮೇಲಿನ ಧೈರ್ಯ ಹಾಗೂ ಶ್ರೀ ಶಾರದಾ ಮಾತೆಯ ಅನುಗ್ರಹದ ಬಲದಿಂದ ಅವುಗಳು ಉತ್ತಮವಾಗಿ ಹೊರಬಂದಿದೆ ಎಂದು ಹೇಳುತ್ತಾರೆ ಪ್ರಸಾದ್ ಪೈ.

ಒಟ್ಟಾರೆಯಾಗಿ ಹೇಳುವುದಾದರೆ, ಮಂಗಳೂರಿನ ಈ ಯುವ ತಂಡವು ಪಟ್ಟ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ಸ್ಫೂರ್ತಿ ನೀಡುವ ಇನ್ನಷ್ಟು ಕೆಲಸ ಕಾರ್ಯಗಳು ಇವರಿಂದಾಗಲಿ ಎಂಬ ಸದಾಶಯ ನಮ್ಮದು.

ಕೇವಲ ಶಾರದೆ ಹಾಗೂ ಕಾಳಿಯನ್ನು ಏಕೆ ಆಯ್ದುಕೊಂಡದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾ, “ಶಾರದೆ ಸಾತ್ವಿಕ ಸ್ವಭಾವದವಳು. ವಿದ್ಯೆ ಹಾಗೂ ಸಂಸ್ಕಾರದ ಸಂಕೇತ. ಅದೇ ರೀತಿ ಕಾಳಿ ಅಪ್ಪಟ್ಟ ವಿರೋಧಿ ಸ್ವಭಾವದವಳು. ಅನ್ಯಾಯದ ವಿರುದ್ಧ ಹೋರಾಡುವವಳು. ದುಷ್ಟರ ಸಂಹಾರ ಮಾಡುವವಳು. ಇಬ್ಬರ ಗುಣಗಳೂ ಸಹ ಪ್ರತಿಯೊಬ್ಬ ಹೆಣ್ಣಿನಲ್ಲಿ ಇರಬೇಕು ಎಂಬ ಉದ್ದೇಶದಿಂದ ಕೇವಲ ಶಾರದೆ ಹಾಗೂ ಕಾಳಿ ಮಾತೆಯನ್ನು ತೋರಿಸಿದ್ದೇವೆ

 

LEAVE A REPLY

Please enter your comment!
Please enter your name here