ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕ್ರಿಕೆಟಿಗ ಎಂದು ಹೇಳಿದರೇ?

0
237
Tap to know MORE!

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಚಲನಚಿತ್ರ ನಟ-ನಟಿಯರು, ರಾಜಕಾರಣಿಗಳು ಮತ್ತು ಕ್ರೀಡಾಪಟುಗಳು, ಈ ಭರವಸೆಯ ಮತ್ತು ಬಹುಮುಖ ಯುವ ನಟನ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.

ಇದರ ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂತಾಪ ಟ್ವೀಟ್, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಸುಶಾಂತ್ ರಜಪೂತ್ ಅವರನ್ನು ಕ್ರಿಕೆಟಿಗ ಎಂದು ಉಲ್ಲೇಖಿಸಿದ್ದಾರೆ.

ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ಬದಲಾಯಿಸಲಾಗಿದೆ ಎಂಬುದನ್ನು ಕಂಡುಹಿಡಿದಿದೆ. ಕಾಂಗ್ರೆಸ್ ನಾಯಕ ತಮ್ಮ ಮೂಲ ಟ್ವೀಟ್‌ನಲ್ಲಿ ರಜಪೂತ್ ಅವರನ್ನು ನಟ ಎಂದು ಉಲ್ಲೇಖಿಸಿದ್ದಾರೆಯೇ ಹೊರತು ಕ್ರಿಕೆಟಿಗರಲ್ಲ.

ಅದರ ಸತ್ಯಾಸತ್ಯತೆಯನ್ನು ತಿಳಿಯಲು, ರಾಹುಲ್ ಗಾಂಧಿಯವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಪರಿಶೀಲಿಸಲಾಗಿದೆ ಮತ್ತು ಮೂಲ ಟ್ವೀಟ್ ಅನ್ನು ನೋಡುವಾಗ, ಅಲ್ಲಿ ಅವರು ಸುಶಾಂತ್ ರಜಪೂತ್ ಅವರನ್ನು “ನಟ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

LEAVE A REPLY

Please enter your comment!
Please enter your name here