ಬಂಗಾಳ: ದಿನಗೂಲಿ ಕಾರ್ಮಿಕನ ಪತ್ನಿ ಈಗ ಬಿಜೆಪಿ ಶಾಸಕಿ!

0
194
Tap to know MORE!

ಕೋಲ್ಕತ್ತ, ಮೇ 03: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದೆ. ರಾಜ್ಯದಲ್ಲಿ ಪಕ್ಷ 3ನೇ ಬಾರಿಗೆ ಸರ್ಕಾರವನ್ನು ರಚನೆ ಮಾಡಲಿದೆ. ಬಿಜೆಪಿ 77 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜ್ಯದ ಸಾಲ್ಟೋರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ ಸುಮಾರು 4145 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿದ್ದಾರೆ. ಚಂದನಾ ಅವರ ಪತಿ ಸೃಬನ್ ದಿನಗೂಲಿ ನೌಕರರಾಗಿದ್ದು, ದಂಪತಿಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡ್ ಸಹ ಹೊಂದಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮಕ್ಕೆ ಸುವೇಂದುವೇ ಅಧಿಕಾರಿ| ಮಮತಾಗೆ ಭಾರೀ ಮುಖಭಂಗ

30 ವರ್ಷದ ಚಂದನಾ ಬೌರಿ ಅವರು ಮೂರು ಮಕ್ಕಳ ತಾಯಿ. ಅವರ ಆಸ್ತಿ 30,311 ರೂ.ಗಳಾಗಿದೆ. ಮೂರು ಆಡು, ಮೂರು ಹಸುಗಳು ಮತ್ತು ಒಂದು ಗುಡಿಸಲನ್ನು ಚಂದನಾ ಅವರು ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದು, ಗೆದ್ದು ಬಂದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಚಂದನಾ ಪತಿ ಸೃಬನ್ ದಿನಗೂಲಿ ಕಾರ್ಮಿಕರು. ಮಳೆಗಾಲದಲ್ಲಿ ಚಂದನಾ ಸಹ ಪತಿಯ ಜೊತೆ ಕೆಲಸಕ್ಕೆ ಹೋಗುತ್ತಾರೆ. ದಂಪತಿಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡ್‌ ಸಹ ಹೊಂದಿದ್ದಾರೆ. ಚಂದನಾ ಅವರು ಚುನಾವಣೆ ಗೆದ್ದ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿಎಂಸಿ 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here