ಪ.ಬಂಗಾಳ : ಟಿಎಂಸಿಗೆ ರಾಜಿನಾಮೆ ನೀಡಿ, ಬಿಜೆಪಿ ಪಕ್ಷ ಸೇರಿದ ಹಿರಿಯ ಶಾಸಕ!

0
141
Tap to know MORE!

ಕೊಲ್ಕತ್ತಾ ನ.27: ತೃಣಮೂಲ ಕಾಂಗ್ರೆಸ್ ಶಾಸಕ ಮಿಹಿರ್ ಗೋಸ್ವಾಮಿ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷವನ್ನು ತೊರೆದು ಶುಕ್ರವಾರ ಬಿಜೆಪಿಗೆ ಸೇರಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿ ರಾಜ್ಯದಲ್ಲಿ “ಹೊಸ ರಾಜಕೀಯ ಯುಗ” ವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಸಮ್ಮುಖದಲ್ಲಿ, ಗೋಸ್ವಾಮಿಯವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು. ತಮ್ಮ ನಿಲುವನ್ನು ಸ್ಪಷ್ಟೀಕರಿಸುತ್ತಾ, “ಅನೈತಿಕ ಮತ್ತು ತಪ್ಪಾದ ಘಟನೆಗಳ ವಿರುದ್ಧದ ಹೋರಾಟ” ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೊಂದಿಗೆ ಸುಮಾರು 22 ವರ್ಷಗಳ ಕಾಲ ಸಂಬಂಧ ಹೊಂದಿದ್ದ ಕೂಚ್ ಬೆಹರ್ ದಕ್ಷಿಣದ ಶಾಸಕ, ಇಂದು ಸಂಜೆಯಷ್ಟೇ ಟಿಎಂಸಿಯಿಂಂದ ಹೊರನಡೆದಿದ್ದರು. ತನಗೆ ಆಗುವ ಅವಮಾನವನ್ನು ಇನ್ನು ಮುಂದೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here