ಬಂಟ್ವಾಳ: ಇಂದು ಪುರಸಭಾ ವ್ಯಾಪ್ತಿಯ 9 ಮಂದಿ ಸೇರಿದಂತೆ, ಇದುವರೆಗೆ ಬಂಟ್ವಾಳ ತಾಲೂಕಿನ 38 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಮೂಡದ 6 ವ್ಯಕ್ತಿಗಳು (33, 35, 37, 13, 30, 60 ವರ್ಷ), ಬಂಟ್ವಾಳ ಕಸಬದ 3 (48, 35, 39 ವರ್ಷ) ವ್ಯಕ್ತಿಗಳಲ್ಲಿ ಕೊರೋನಾ ಇರುವುದು ಇಂದು ದೃಢಪಟ್ಟಿದೆ. ಅವರನ್ನು ಸೇರಿದಂತೆ, ವಿಟ್ಲಪಡ್ನೂರು ಗ್ರಾಮದ 7 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ರಾಯಿ, ಪಂಜಿಕಲ್ಲು, ಪಜೀರು, ಅಮ್ಮುಂಜೆ, ಬೆಂಜನಪದವು, ಕಲಾಯಿ, ಮಣಿನಾಲ್ಕೂರು ವಿಟ್ಲ ಕಸ್ಬಾ, ಕಲ್ಲಡ್ಕ, ತುಂಬೆ, ಸಜೀಪಮುನ್ನೂರು, ಸೊರ್ನಾಡು, ಬೋಳಂತೂರುಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಪುರಸಭೆಯ ಮಹಿಳಾ ಸಿಬ್ಬಂದಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಂದು ಪುರಸಭಾ ಕಚೇರಿಯನ್ನು ಸೀಲ್ ಡೌನ್ ಮಾಡಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಯಿತು.