ಡಿ.5 ರ ಬಂದ್‌ಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಎಲ್ಲರೂ ಸಹಕರಿಸಬೇಕು : ಕರವೇ

0
132
Tap to know MORE!

ಬೆಂಗಳೂರು (ಡಿ. 1): ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಸರ್ಕಾರದ ನಿರ್ಧಾರ ಖಂಡಿಸಿ ಕರೆ ನೀಡಲಾಗಿರುವ ಬಂದ್​ಗೆ ಜನರು ಮನೆಯಲ್ಲಿದ್ದುಕೊಂಡು ಬೆಂಬಲ ಸೂಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕರೆ ನೀಡಿದ್ದಾರೆ.

ವಾಟಾಳ್​ ನಾಗರಾಜ್​ ಕರೆ ನೀಡಿರುವ ಬಂದ್​ಗೆ ನಮ್ಮ ಬೆಂಬಲವಿದೆ. ಅಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ. ಬೆಂಗಳೂರಿನಲ್ಲಿ ಕೂಡ ನೂರಾರು ಕಾರ್ಯಕರ್ತರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಈ ಬಂದ್​ ನಡೆಸಲು ಸರ್ಕಾರವೇ ಕಾರಣ ಹೊರತು ಕನ್ನಡ ಸಂಘಟನೆಗಳು ಅಲ್ಲ. ಇನ್ನಾದರೂ ಸಿಎಂ ಉದ್ಧಟನ ಬಿಟ್ಟು ಎಲ್ಲರನ್ನು ಒಂದೂಗೂಡಿಸಿಕೊಂಡು ಹೋಗಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಬಂದ್ ಬೆಂಬಲ ನೀಡಿಲ್ಲ. ಅದರೆ ಈ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಭಾಷೆ ವಿಚಾರವಾಗಿ ಈ ಬಂದ್ ನಡೆಯುತ್ತಿದೆ.

ಬಸವಕಲ್ಯಾಣ ಚುನಾವಣೆಗೆ ಗೆಲ್ಲಲು, ಮರಾಠ ಸಮುದಾಯ ಓಲೈಕೆಗೆ, ಸರ್ಕಾರ ಮರಾಠ ಅಭಿವೃದ್ಧಿ ರಚಿಸಿದೆ. ಅಲ್ಲದೇ ಶಾಸಕ ಯತ್ನಾಳ್​ ಅವರು ಕನ್ನಡ ಪರ ಸಂಘಟನೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಬಿಜೆಪಿ ಪಕ್ಷದ ಅಜೆಂಡಾನಾ ಅಥವಾ ಈ ಹೇಳಿಕೆ ಕೇವಲ ಯತ್ನಾಳ್ ಹೇಳಿಕೆಯೋ ಸ್ಪಷ್ಟಪಡಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಯಡಿಯೂರಪ್ಪ ಬಗ್ಗೆ ನಮಗೆ ಗೌರವವಿದೆ. ಸರ್ಕಾರದ ಧೋರಣೆಯಿಂದಾಗಿ ಡಿಸೆಂಬರ್ 5ರಿಂದ ಹೋರಾಟಗಾರರು ಬೀದಿಗಿಳಿಯುವ ಸ್ಥಿತಿ ಬಂದಿದೆ. ಈ ಕುರಿತು ಅವರು ಸಮಾಧಾನವಾಗಿ ಮಾತನಾಡುವ ಪ್ರಯತ್ನ ನಡೆಸಲಿಲ್ಲ. ಆದರೆ, ಸರ್ಕಾರ ತನ್ನ ಭಂಡ ಧೈರ್ಯಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.

ಡಿಸೆಂಬರ್​ 5 ರಂದು ಬೆಳಗ್ಗೆ 6 ಇಲ್ಲ 7ರಿಂದಲೇ ಕರವೇ ಜಿಲ್ಲೆ ಹಾಗೂ ತಾಲೂಕಿನಲ್ಲಿರುವ ಸರ್ಕಾರಿ ಕಚೇರಿ ಮುತ್ತಿಗೆ ಹಾಕಲಿದೆ. ಬೆಂಗಳೂರಿನಲ್ಲಿ 10 ಗಂಟೆಗೆ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆ ಗಾಂಧಿನಗರದಿಂದ ಸಿಎಂ ಗೃಹ ಕಚೇರಿವರೆಗೆ ಸಾಗಲಿದ್ದು, ಬಳಿಕ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು. ಡಿಸೆಂಬರ್ 5ರಂದು ಮಾತ್ರ ಬಂದ್, ಹೋರಾಟವಿರುವುದಿಲ್ಲ. ಮರಾಠ ಪ್ರಾಧಿಕಾರ ಆದೇಶ ಹಿಂಪಡೆಯುವವರೆಗೂ ಈ ಹೋರಾಟ ನಿರಂತರವಾಗಿರಲಿದೆ ಎಂದರು

LEAVE A REPLY

Please enter your comment!
Please enter your name here