ಬಕ್ರೀದ್ ಹಿನ್ನೆಲೆ| ಉಡುಪಿಯಲ್ಲಿ ಒಂಟೆ, ಗೋವು ಹತ್ಯೆ, ಅನಧಿಕೃತ ಪ್ರಾಣಿ ಸಾಗಾಣೆ ನಿಷೇಧ

0
149
Tap to know MORE!

ಉಡುಪಿ: ಬಕ್ರೀದ್ ಹಬ್ಬದ ಆಚರಣೆ ಸಂದರ್ಭ ಒಂಟೆ, ಗೋವುಗಳ ಹತ್ಯೆ ಮಾಡುವಂತಿಲ್ಲ. ಅನಧಿಕೃತವಾಗಿ ಪ್ರಾಣಿಗಳನ್ನು ಸಾಗಾಣೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಣಿಗಳ ಅನಧಿಕೃತ ಸಾಗಾಣೆ ಹಾಗೂ ವಧೆ ತಡೆ ಸಂಬಂಧ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ, ಗೋವುಗಳ ಅಧಿಕೃತ ಸಾಗಣೆಗೆ ಪಶು ಇಲಾಖೆಯಿಂದ ಅನುಮತಿ ಇರಬೇಕು. ಕೃಷಿಗೆ ಮತ್ತು ಪಶು ಸಂಗೋಪನೆಗೆ ಮಾತ್ರ ಗೋವುಗಳನ್ನು ಸಾಗಾಟ ಮಾಡಬಹುದು. ರೋಗಗ್ರಸ್ತ ಜಾನುವಾರುಗಳನ್ನು ಸಾಗಿಸುತ್ತಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ಹಾಜರು ಕಡ್ಡಾಯ ಎಂದರು.

ಬಕ್ರೀದ್ ಹಬ್ಬದ ಆಚರಣೆಗೆ ಮಾರ್ಗಸೂಚಿ ಪ್ರಕಟ | ಸಾಮೂಹಿಕ ಪ್ರಾರ್ಥನೆಗೆ ಇಲ್ಲ ಅವಕಾಶ

ಅನಧಿಕೃತವಾಗಿ ಗೋವುಗಳನ್ನು ಸಾಗಿಸುವ ವಾಹನಗಳನ್ನು ಪತ್ತೆಮಾಡಿ ಗೋವುಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸಬೇಕು. ಜಾನುವಾರುಗೆ ಚಿಕಿತ್ಸೆ ಅಗತ್ಯವಿದ್ದರೆ ಪಶುವೈದ್ಯಾಧಿಕಾರಿಯಿಂದ ಚಿಕಿತ್ಸೆ ಕೊಡಿಸಬೇಕು. ಗೋವುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪ್ರಕರಣ ದಾಖಲಾದ ಬಳಿಕ ಗೋಶಾಲೆಗೆ ಹಸ್ತಾಂತರ ಮಾಡಿದ ಗೋವುಗಳನ್ನು ನ್ಯಾಯಾಲಯದಿಂದ ಆದೇಶವಾದ ಬಳಿಕ ಮಾಲೀಕರು ಪಡೆದುಕೊಳ್ಳಬಹುದು. ಈ ಸಂದರ್ಭ ಗೋಶಾಲೆಗಳಲ್ಲಿದ್ದಷ್ಟು ದಿನ ಗೋವುಗಳ ನಿರ್ವಹಣಾ ವೆಚ್ಚವನ್ನು ಭರಿಸಬೇಕು. ಅನಧಿಕೃತ ವಧಾಗಾರಗಳನ್ನು ಪತ್ತೆಹಚ್ಚಬೇಕು. ಗೋವಧೆ ಮಾಡುವವರನ್ನು ಠಾಣೆಗೆ ಕರೆಸಿ ತಿಳಿವಳಿಕೆ ನೀಡಿ ಮುಚ್ಚಳಿಕೆ ಪಡೆಯಬೇಕು ಎಂದು ಸೂಚಿಸಿದರು.

LEAVE A REPLY

Please enter your comment!
Please enter your name here