ಬಕ್ರೀದ್ ಹಬ್ಬದ ಆಚರಣೆಗೆ ಮಾರ್ಗಸೂಚಿ ಪ್ರಕಟ | ಸಾಮೂಹಿಕ ಪ್ರಾರ್ಥನೆಗೆ ಇಲ್ಲ ಅವಕಾಶ

0
144
Tap to know MORE!

ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಜುಲೈ.21ರಂದು ಬಕ್ರೀದ್ ಹಬ್ಬದ ಆಚರಣೆಗೆ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆಗೊಳಿಸಿದೆ. ಈ ಕ್ರಮದಂತೆ ಈದ್ಗಾ ಮೈದಾನಗಳಲ್ಲಿನ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಹಾಕಿದ್ದು, ಮಸೀದಿಗಳಲ್ಲಿ 50 ಜನರೊಂದಿಗೆ ಕೊರೋನಾ ನಿಯಂತ್ರಣ ಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸೋದಕ್ಕೆ ಅವಕಾಶ ನೀಡಿದೆ.

ಈ ಕುರಿತಂತೆ ಅಲ್ವಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ.ಹೆಚ್.ಜಿ ನಡವಳಿಗಳನ್ನು ಹೊರಡಿಸಿದ್ದು, ಮುಸ್ಲಿಂ ಬಾಂಧವರ 2ನೇ ಪ್ರಮುಖ ಹಬ್ಬವಾದ 2021ನೇ ಸಾಲಿನ ಬಕ್ರೀದ್ ಹಬ್ಬವನ್ನು ಜುಲೈ.21ನೇ ತಾರೀಕಿನಂದು ಆಚರಿಸಲಾಗುವುದೆಂದು ರಾಜ್ಯದ ಹಿಲಾಲ್ ಸಮಿತಿ ಘೋಷಿಸಿರುತ್ತದೆ. ಅಂದು ಈದ್ಗಾ ಮೈದಾನದಲ್ಲಿ ಅಥವಾ ಸ್ಥಳೀಯ ಮಸೀದಿಗಳಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಧಾರ್ಮಿಕ ಕರ್ತವ್ಯಗಳಲ್ಲಿ ಒಂದಾಗಿರುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಕ್ರೀದ್ ದಿನದ ಸಾಮೂಹಿಕ ಪ್ರಾರ್ಥನೆ ಸಾಮಾನ್ಯವಾಗಿ ಈದ್ಗಾಗಳಲ್ಲಿ ನಿರ್ವಹಿಸುವಂತಹ ಪರಿಪಾಟವಿರುತ್ತದೆ. ಒಂದು ವೇಳೆ ಈದ್ಗಾಗಳಲ್ಲಿ ಪ್ರಾರ್ಥನೆ ಮಾಡಲು ಕಾನೂನು ಸುವ್ಯವಸ್ಥೆ, ಮಳೆ ಅಥವಾ ಇತರೆ ಯಾವುದೇ ತೊಡಕುಗಳಿದ್ದಲ್ಲಿ, ಅಂತಹ ಸಂದರ್ಭಗಳ್ಲಲಿ ಹಾಗೂ ಒಂದು ವೇಳೆ ಈದ್ಗಾ ಇಲ್ಲದಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಸೀದಿಗಳಲ್ಲಿ ನಮಾಜ್ ಮಾಡಲಾಗುತ್ತದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ₹34 ಲಕ್ಷ ಮೌಲ್ಯದ ಚಿನ್ನ ವಶ | ಕೇರಳ ಮೂಲದ ಇಬ್ಬರ ಬಂಧನ

ರಾಜ್ಯದೆಲ್ಲೆಡೆ ಕೋವಿಡ್-19 ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆಯನ್ನು ಅನುಸರಿಸುವ ಅನಿವಾರ್ಯತೆಯಿರುತ್ತದೆ. ಮುಂಬರುವ ದಿನಗಳಲ್ಲಿ ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ.

ಸಾಮಾನ್ಯವಾಗಿ ಈದ್ಗಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಧಿಷ್ಟವಾದಂತಹ ಯಾವುದೇ ಒಂದು ಮಸೀದಿಯ ಅಥವಾ ಆಡಳಿತ ಮಂಡಳಿಯ ಅಧೀನದಲ್ಲಿ ಇಲ್ಲದೇ ಇರುವ ಹಿನ್ನಲೆಯಲ್ಲಿ ಸಾಮೂಹಿಕ ಅಂತರ, ಸಾಮಾಜಿಕ ಅಂತರ ಮತ್ತು ಇತರೆ ಸೋಂಕು ಹರಡದಿರುವಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಈದ್ಗಾಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದು, ಸಡಿಲಿಸಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ನಿರ್ವಹಿಸಲು ಇಚ್ಛಿಸಿದ್ದಲ್ಲಿ ಈಗಾಗಲೇ ದಿನಾಂಕ 01-03-2021ರಂದು ಹೊರಡಿಸಲಾಗಿರುವ ಎಸ್ಓಪಿ ಮಾರ್ಗಸೂಚಿಗಳ ಷರತ್ತಿಗೊಳಪಟ್ಟು, ಮಸೀದಿಗಳಲ್ಲಿ ಮಾತ್ರ ಕನಿಷ್ಠ ಭಕ್ತಾದಿಗಳೊಂದಿಗೆ ಪ್ರಾರ್ಥನೆ ನಿರ್ವಹಿಸಲು ಅವಕಾಶವಿರುತ್ತದೆ.

ಈ ಎಲ್ಲಾ ಹಿನ್ನಲೆಯಲ್ಲಿ, ಜುಲೈ.21, 2021ರಂದು ಬಕ್ರೀದ್ ಹಬ್ಬದ ದಿನ ಈದ್ಗಾಗಳಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದು, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಚಿಸಿದ್ಧಲ್ಲಿ ಸರ್ಕಾರದ ಆದೇಶದನ್ವಯ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಆಯಾ ಮಸೀದಿಗಳ್ಲಲಿ 50 ಜನರು ಮೀರದಂತೆ ಈ ಕೆಳಕಂಡ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದು ಎಂಬುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here