ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿಗಳು ಮಾತನಾಡಿದಾಗ ಮುಂಬರುವ ಹಬ್ಬ ಹರಿದಿನಗಳಲ್ಲಿ ಜನರ ಖರ್ಚು ವೆಚ್ಚಗಳು ಹೆಚ್ಚಾಗಲಿದೆ ಎಂದು ಹೇಳುತ್ತಾ, ಕೆಲವು ಹಬ್ಬಗಳ ಬಗ್ಗೆ ಉಲ್ಲೇಖಿಸಿದ್ದರು. ಈ ಭಾಷಣದಲ್ಲಿ ಮಹತ್ವದ ಘೋಷಣೆಯನ್ನೂ ಘೋಷಿಸಿದ್ದರು. ಇತ್ತ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಭಾಷಣವನ್ನು ಟೀಕಿಸುತ್ತಿದ್ದಾರೆ. ಹಾಗೆಯೇ,ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮುಂಬರುವ ಎಲ್ಲ ಹಬ್ಬಗಳ ಹೆಸರು ಹೇಳಿದ ಪ್ರಧಾನಿಗಳು, ಬಕ್ರಿದ್ ಬಗ್ಗೆ ಹೇಳಲಿಲ್ಲ ಎಂದಿದ್ದಾರೆ.
.@PMOIndia aaj China par bolna tha, bol gaye CHANA par. Which was also necessary since your unplanned lockdown had left many working people without food.
Also noticed that you listed many festivals in coming months but missed Baqr Eid? Chaliye, phir bhi aapko peshgi Eid Mubarak— Asaduddin Owaisi (@asadowaisi) June 30, 2020
@PMOIndia ಇಂದು ನೀವು ಚೀನಾ ಬಗ್ಗೆ ಮಾತನಾಡುವ ಬದಲು ಚನಾ (ಕಡಲೆ) ಬಗ್ಗೆ ಮಾತನಾಡಿದ್ದೀರಿ. ಜಾರಿಯಲ್ಲಿದ್ದ ಲಾಕ್ಡೌನ್, ಅನೇಕ ದುಡಿಯುವ ಜನರನ್ನು ಆಹಾರವಿಲ್ಲದೆ ಬಿಟ್ಟಿರುವುದರಿಂದ ಇದು ಸಹ ಅಗತ್ಯವಾಗಿತ್ತು.
ಮುಂಬರುವ ತಿಂಗಳುಗಳಲ್ಲಿ ನೀವು ಅನೇಕ ಹಬ್ಬಗಳನ್ನು ಪಟ್ಟಿ ಮಾಡಿದ್ದೀರಿ ಆದರೆ ಬಕ್ರೀದ್ ಅನ್ನು ತಪ್ಪಿಸಿಕೊಂಡಿದ್ದೀರಾ? ಇರಲಿ, ಆದರೂ ನಿಮಗೆ “ಈದ್ ಮುಬಾರಕ್” ಶುಭಾಶಯಗಳು
-ಆಸಾವುದ್ದೀನ್ ಓವೈಸಿ
ಹಬ್ಬಗಳು ಬಂದಂತೆ ಅವಶ್ಯಕತೆಗಳ ಜೊತೆಯಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದೀಪಾವಳಿವರೆಗೆ ಬಿಪಿಎಲ್ ಕುಟುಂಬಗಳ ಪ್ರತಿಯೊಬ್ಬರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ಕುಟುಂಬಕ್ಕೆ ಒಂದು ಕೇಜಿ ಬೇಳೆಯನ್ನು ಉಚಿತವಾಗಿ ನೀಡೋದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.