“ಬಕ್ರೀದ್ ಸಂದರ್ಭ ಪ್ರಾಣಿಗಳ ಬದಲು ನಿಮ್ಮ ಮಕ್ಕಳನ್ನು ಬಲಿ ನೀಡಿ” – ಬಿಜೆಪಿ ಶಾಸಕ

0
213
Tap to know MORE!

“ಮಾಂಸದಿಂದ ಕೊರೋನಾ ವೈರಸ್ ಹರಡುತ್ತದೆ ಎಂದು ಕೆಲವು ವರದಿಗಳು ಹೇಳುತ್ತವೆ. ಹೀಗಾಗಿ ಜನರು ಮುಗ್ಧ ಪ್ರಾಣಿಗಳನ್ನು ಬಲಿ ಕೊಡಬಾರದು. ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳ ಬದಲು, ಮುಸ್ಲಿಮರು ತಮ್ಮ ಮಕ್ಕಳನ್ನು ಬಲಿ ನೀಡಲಿ” ಎಂದು ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಬಕ್ರಿದ್ ಸಂದರ್ಭದಲ್ಲಿ ಪ್ರಾಣಿಗಳನ್ನು ತ್ಯಾಗ ಮಾಡುವವರಿಗೆ ನೇರ ಎಚ್ಚರಿಕೆ ನೀಡಿದರು ಮತ್ತು ಅಂತಹವರು, ಪ್ರಾಣಿಗಳ ಬದಲು ತಮ್ಮ ಮಕ್ಕಳನ್ನು ತ್ಯಾಗ ಮಾಡಬೇಕು ಎಂದು ಹೇಳಿದರು. ಮಾಂಸಾಹಾರವನ್ನು ಸೇವಿಸುವ ಮೂಲಕ ಕೊರೋನಾ ಮತ್ತಷ್ಟು ಹರಡುತ್ತದೆ ಎಂದರು.

ಈ ಬಾರಿಯ ಬಕ್ರಿದ್ ಹಬ್ಬವನ್ನು ಬಹುಶಃ ಜುಲೈ 31 ರಂದು ಆಚರಿಸಲಾಗುವುದು. ಮುಸ್ಲಿಮರ ಮುಖ್ಯ ಹಬ್ಬವಾದ ಬಕ್ರಿದ್‌ನಲ್ಲಿ ಆಡು ಅಥವಾ ಇತರ ಪ್ರಾಣಿಗಳನ್ನು ಕತ್ತರಿಸಿ ಬಲಿ ಕೊಡುವುದು ವಾಡಿಕೆ. 

ಸುದ್ದಿಗಾರರೊಂದಿಗೆ ಮಾತನಾಡುವಾಗ ನಂದ್ ಕಿಶೋರ್ ಗುರ್ಜರ್, ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಈ ಸಮಯದಲ್ಲಿ ಜನರು ಮಸೀದಿ, ದೇವಾಲಯಗಳಿಗೆ ತೆರಳುತ್ತಿಲ್ಲ. ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಪ್ರಾಣಿಗಳನ್ನು ಬಲಿ ಕೊಡುವುದನ್ನೂ ಜನರು ಕೈಬಿಡಬೇಕು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here