ಮಂಗಳೂರು : ಕೋಳಿ ಮಾಂಸದ ಅಂಗಡಿಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಮಂಗಳೂರಿನ ಬಜ್ಪೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಮಹಮ್ಮದ್ ಸಮೀರ್ ಮತ್ತು ಮಹಮ್ಮದ್ ಸಫಿಕ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಗೋಹತ್ಯೆಗೆ ನಿಷೇಧ ಹೇರಿದ ಶ್ರೀಲಂಕಾ ಸರ್ಕಾರ!
ಇವರು ಮೂಡುಪೆರಾರ ಗ್ರಾಮದ ಸೂರಲ್ಪಾಡಿಯ ಸಲ್ವಾ ಚಿಕನ್ ಸೆಂಟರ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಖಚಿತ ಮಾಹಿತಿ ಆಧರಿಸಿ ಬಜಪೆ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯ್ಕ್ ಮತ್ತು ಸಿಬ್ಬಂದಿಗಳು ಚಿಕನ್ ಸೆಂಟರ್ ಗೆ ಢಿಡೀರ್ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದಾಳಿ ಸಂದರ್ಭ ಅಂಗಡಿಯಲ್ಲಿದ್ದ ಸುಮಾರು 23 ಕೆ .ಜಿ. ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದು ಆರೊಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.