ಬದಲಾಗುತ್ತಿರುವ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

0
204
Tap to know MORE!

ತನ್ನ ಐದು ಸಾವಿರ ವರ್ಷಗಳ ನಾಗರಿಕ ಜೀವನದ ಇತಿಹಾಸದಲ್ಲಿ ಹಲವಾರು ಬದಲಾವಣೆ ಕಂಡಿರುವ ಬದಲಾಗುತ್ತಿರುವ ನಮ್ಮ ಭಾರತ ದೇಶ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಹಲವಾರು ಕೊರೆತೆಗಳ ನಡುವೆಯೂ ನಮ್ಮ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವೆ ಗುರುತಿಸಿಕೊಳ್ಳುತಿರುವುದು ನಮ್ಮ ಹೆಮ್ಮೆ. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ.

ನಮಗೆಲ್ಲ ಸುಧಾರಣೆ ಬೇಕು, ಆದರೆ ನಾವು ಬದಲಾಗುವುದಿಲ್ಲ. ಸುಧಾರಣೆ ಎಂದರೆ ಬದಲಾವಣೆ, ನಮ್ಮ ಕೂದಲನ್ನು ಬಾಚಿ ನೆಟ್ಟಗೆ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಹೃದಯವನ್ನು ಸ್ವಚ್ಛ ಹಾಗೂ ಶುದ್ಧವಾಗಿ ಇಟ್ಟುಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನ ಮಾಡುವುದಿಲ್ಲ. ನಮ್ಮ ಪ್ರಗತಿ ನಾವು ಉಟ್ಟ ಬಟ್ಟೆಯಿಂದಲ್ಲ ಬದಲಾಗಿ ಅದು ನಮ್ಮ ಮನಸ್ಸನ್ನು ಅವಲಂಬಿಸಿದೆ. To change the world we have to change ourselves first. ಅದನ್ನೇ ಗಾಂಧೀಜಿಯವರು ‘ನೀವು ಇತರರಲ್ಲಿ ಬಯಸುವ ಬದಲಾವಣೆ ಮೊದಲು ನಿಮ್ಮಲ್ಲಿ ತಂದುಕೊಳ್ಳಿ. ‘ ಎಂದು ಹೇಳಿದ್ದಾರೆ.

ಭಾರತೀಯರಾದ ನಾವು ನೆನಪಿಡಬೇಕಾದ ಸಂಗತಿಯೆಂದರೆ, ಬ್ರಿಟಿಷ್ ಸಾಮ್ರಾಜ್ಯವು ನಮ್ಮ ದೇಶವನ್ನು ಆಕ್ರಮಣ ಮಾಡಿ ಅಧಿಕಾರವನ್ನು ಅವರ ಕೈಯಲ್ಲಿ ಇರಿಸಿಕೊಂಡಾಗ ಭಾರತೀಯರೆಲ್ಲರ ಒಗ್ಗಟ್ಟನ್ನ ಕಂಡು ಬ್ರಿಟಿಷರು ನಡು ರಾತ್ರಿಯಲ್ಲಿ ದೇಶ ಬಿಟ್ಟು ಓಡಿಹೋಗುವ ಪ್ರಸಂಗ ಎದುರಾಯ್ತು. ಹಾಗಾಗಿ ನಾವೆಲ್ಲರೂ ಒಗ್ಗಟ್ಟಾದರೆ ನಮ್ಮ ಇಡೀ ದೇಶದ ವ್ಯವಸ್ಥೆ ಬದಲಾಯಿಸಲು ಸಾಧ್ಯವಿದೆ. ದೇಶದ ಬದಲಾವಣೆ ಕೇವಲ ಒಬ್ಬ ಪ್ರಧಾನಿ ಅಥವಾ ಮುಖ್ಯಮಂತ್ರಿಗೆ ಸೀಮಿತವಾಗಿರುವುದಿಲ್ಲ ಬದಲಾಗಿ ದೇಶದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ.

ಪ್ರಮೀಳಾ, ಮಂಗಳೂರು

LEAVE A REPLY

Please enter your comment!
Please enter your name here