ಬಸ್ಕಿ-ಮಸ್ತಿ

0
250
Tap to know MORE!

ಈ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅಕ್ಷರಶಃ ಗಣಿತ ಮೇಷ್ಟ್ರುನ್ನ ಖಂಡಿತಾ ಮರೆಯಲ್ಲ. ಯಾಕೆಂದ್ರೆ ಅವರ ಕೊಡೋ ಶಿಕ್ಷೆ ಒಂದಾ,ಎರಡಾ…??.ನಾಗರಬೆತ್ತದ ಚಡಿಯೇಟು,ಕಿವಿ ಹಿಂಡೋದು, ತಲೆಗೆ ಕುಟ್ಟುವುದು, ಅದ್ರಲ್ಲೂ ಬಸ್ಕಿ ಹೊಡೆಯೋದಂತೂ ಸರ್ವೇ ಸಾಮಾನ್ಯ. ಈ ಸೇವೆಯಲ್ಲಿ ನಾವೆಲ್ಲಾ ಪಾತ್ರರಾಗಿದ್ದೇವೆ ಅಂದ್ರೆ ತಪ್ಪಾಗಲಾರದು.
ಈ ಪ್ರಯೋಗ ನಮ್ಮ ಗುರುಕುಲ ಪದ್ಧತಿಯಿಂದ ಬಳುವಳಿಯಾಗಿ ಬಂತು ಎನ್ನಬಹುದು. ಎಡಕಿವಿಯನ್ನು ಬಲಗೈಯಲ್ಲಿ ಹಾಗೂ ಬಲಕಿವಿಯನ್ನು ಎಡಗೈಯಲ್ಲಿ ಹಿಡಿದು ಅರ್ಧಮಂಡಿಯಲ್ಲಿ ಕೂತು ಏಳಬೇಕಿತ್ತು.ಆದರೆ ಇದನ್ನು ಶಿಕ್ಷೆ ಅನ್ನೋದು ತಪ್ಪಾಗುತ್ತೆ.ದಕ್ಷಿಣ ಭಾರತದ ಕೆಲವು ಜನರು ಈಗಲೂ ದೇವಸ್ಥಾನಗಳಲ್ಲಿ ಬಸ್ಕಿ ಹೊಡೆಯೋದು ನಾವು ಕಾಣಬಹುದು.

ತಿಳಿದು,ತಿಳಿಯದೇ ಮಾಡಿದ ತಪ್ಪಿದ್ದರೆ ಕ್ಷಮಿಸಲಿ ಎಂದು ದೇವರಲ್ಲಿ ಭಕ್ತಿಯಿಂದ ಮೊರೆ ಇಡುತ್ತಾರೆ.
ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆಯೇನಿತ್ತೆಂದರೆ ಎಡಕಿವಿಯನ್ನು ಹಿಡಿದಾಗ ಅಲ್ಲಿನ ನರವು ಮೆದುಳಿನ ಬಲಭಾಗವನ್ನು ಹಾಗೂ ಪಿಟ್ಯುಟರಿ ಗ್ರಂಥಿಯನ್ನು ಸಕ್ರಿಯಗೊಳಿಸುತ್ತದೆ.ಹಾಗೆಯೇ ಬಲಕಿವಿಯನ್ನು ಹಿಡಿದಾಗ ಆ ಒತ್ತಡಕ್ಕೆ ಮೆದುಳಿನ ಎಡ ಭಾಗವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ನಮ್ಮ ಏಕಾಗ್ರತೆ (concentration) ಹೆಚ್ಚುತ್ತದೆ.
ನಮ್ಮ ಮೆದುಳಿನಲ್ಲಿ ನಾಲ್ಕು ತರಂಗಗಳು (waves)ಉತ್ಪತ್ತಿಯಾಗುತ್ತದೆ. ಆಲ್ಫಾ (Alpha),ಬೀಟಾ (Beta), ತೀಟಾ(theta), ಮತ್ತು ಡೆಲ್ಟಾ(Delta).ಈ ಬಸ್ಕಿ ಹೊಡೆಯೋದ್ರಿಂದ ಆಲ್ಫಾ ತರಂಗಗಳು ಉತ್ಪತ್ತಿಯಾಗಿ ನಮ್ಮ “ಏಕಾಗ್ರತೆ,ಕಲಿಕಾ ಸಾಮರ್ಥ್ಯ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ “.

ಆದರೆ‌ ವಿಷಾದದ ಸಂಗತಿಯೇನೆಂದರೆ ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವಂತಿಲ್ಲ. ಹಾಗೆಯೇ ಈ ರೀತಿ ಶಿಕ್ಷೆ ಪೋಷಕರೂ ಮಹಾಪರಾಧವಾಗಿ ಪರಿಗಣಿಸುತ್ತಿದ್ದಾರೆ.ಇನ್ನೂ ವಿದೇಶಗಳಲ್ಲಿ ಈ ಪದ್ಧತಿಯನ್ನು “ಸೂಪರ್ ಬ್ರೈನ್ ಯೋಗ” (Super Brain Yoga) ಎಂದು ಕರೆಯಲಾಗುತ್ತಿದೆ.ವಿದೇಶಿಗರು ಅಳವಡಿಸಿಕೊಂಡ ಈ ಪ್ರಯೋಗವನ್ನು ,ನಮ್ಮ ದೇಶದಲ್ಲಿ ಆಧುನೀಕರಣಕ್ಕೆ ಮಾರುಹೋಗಿ ಹಿಂದಿನ ಶಿಕ್ಷಣ ವ್ಯವಸ್ಥೆ ತಪ್ಪು ಎನ್ನುವ ಕಲ್ಪನೆಯ ಬಗೆಗೆ ಏನೆನ್ನಬೇಕೋ ತೋಚುತ್ತಿಲ್ಲ??

-ಜಯಪದ್ಮಿನಿ ಕಾಂಚನ್
ಕುಂದಾಪುರ

LEAVE A REPLY

Please enter your comment!
Please enter your name here