ಬಸ್ಸಿನಲ್ಲಿ ಇನ್ನು ಮುಂದೆ ಅಕ್ಕಪಕ್ಕದಲ್ಲಿ ಕುಳಿತು ಸಂಚರಿಸಬಹುದು!

0
230
Tap to know MORE!

ಬೆಂಗಳೂರು : ಬಸ್ ಪ್ರಯಾಣಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಬಸ್ ಪ್ರಯಾಣಿಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಇನ್ನು ಮುಂದೆ, ಅಂದರೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಂತೆ, ಬಸ್‌ನಲ್ಲಿ ಸಂಚರಿಸುವಾಗ ಸಾಮಾಜಿಕ ಅಂತರದ ಯಾವುದೇ ನಿಯಮಗಳನ್ನು ಪಾಲಿಸುವುದು ಕಡ್ಡಾಯವಲ್ಲ. ಇದರ ಅನ್ವಯ, ಬಸ್‌ನ ಯಾವುದೇ ಸೀಟ್‌ನಲ್ಲಿಯೂ ಪ್ರಯಾಣಿಕರು ಕುಳುತುಕೊಳ್ಳಬಹುದು. ಈ ಹಿಂದೆ, ಇಬ್ಬರು ಪ್ರಯಾಣಿಕರು ಹತ್ತಿರತ್ತಿರಕ್ಕೆ ಕುಳಿತುಕೊಳ್ಳುವಂತಿರಲಿಲ್ಲ.

ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಎನ್‌ಇಆರ್‌ಟಿಸಿ ಇತ್ಯಾದಿಗಳನ್ನು ಬಳಸುವ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಎಲ್ಲಾ ನಿಯಮಗಳನ್ನು ಕಡೆಗಣಿಸಬಹುದು! ಲಾಕ್‌ಡೌನ್‌ನಿಂದಾಗಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ಬಸ್ ನಿರ್ವಾಹಕರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಭಾರಿ ನಷ್ಟವನ್ನು ಎದುರಿಸಿದ್ದರು ಎಂದು ನೆನಪಿಸಿಕೊಳ್ಳಬಹುದು.

ದೀರ್ಘಕಾಲದವರೆಗೆ ನಿಂತಿದ್ದ ಬಸ್ಸುಗಳು, ರಸ್ತೆಗೆ ಇಳಿದಿದ್ದರೂ, ಅನೇಕ ನಿಯಮಗಳು ಮತ್ತು ಮಾರ್ಗಸೂಚಿಗಳಿಂದಾಗಿ ನಷ್ಟದಲ್ಲಿ ಬಸ್‌ ಓಡಿಸಬೇಕಾದಿತ್ತು. ಪ್ರಯಾಣಿಕರು ಇದ್ದರೂ, ಯಾರೂ ಹತ್ತಿರದಲ್ಲಿ ಕೂರುವಂತಿರಲಿಲ್ಲ. ಅದಲ್ಲದೇ, ಕನಿಷ್ಟ ಸೀಟುಗಳು ಭರ್ತಿಯಾದರೆ ಹೆಚ್ಚಿನ ಪ್ರಯಾಣಿಕರನ್ನು ಸೇರಿಸುವಂತಿರಲಿಲ್ಲ.

ಇಲ್ಲಿಯವರೆಗೆ, ಇಬ್ಬರು ಪ್ರಯಾಣಿಕರ ನಡುವೆ ಒಂದು ಆಸನದ ಅಂತರವನ್ನು ಕಾಯ್ದುಕೊಳ್ಳಬೇಕಾಗಿತ್ತು. ಇನ್ನುಮುಂದೆ, ಪ್ರಯಾಣಿಕರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಬಹುದು ಮತ್ತು ಬಸ್‌ನಲ್ಲಿರುವ ಎಲ್ಲಾ ಆಸನಗಳಲ್ಲಿಯೂ ಕುಳಿತುಕೊಳ್ಳಬಹುದು.

ಸಾಮಾಜಿಕ ಅಂತರವಿಡುವ ನಿಯಮಗಳನ್ನು ಸಡಿಲಗೊಳಿಸಲಾಗಿದ್ದರೂ, ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅದೇ ರೀತಿ, ಬಸ್ಸುಗಳಲ್ಲಿ ಪ್ರಯಾಣಿಕರು ನಿಂತುಕೊಂಡು ಸಂಚರಿಸುವಂತಿಲ್ಲ. ಅದಲ್ಲದೆ, ನಿರ್ದಿಷ್ಟ ಪ್ರಯಾಣದ ನಂತರ, ಬಸ್ಸುಗಳನ್ನು ಸ್ಯಾನಿಟೈಜ್‌ಗೊಳಿಸಬೇಕು.

LEAVE A REPLY

Please enter your comment!
Please enter your name here